ನಿಶ್ಯಕ್ತಿಯಿಂದ ಸಾಯುವವರೆಗೂ ವೃತ್ತಾಕಾರವಾಗಿ ಚಲಿಸುತ್ತವೆ ಇರುವೆಗಳು..! ವೈರಲ್ ವಿಡಿಯೋ ನೋಡಿದ್ರೆ ಅಚ್ಚರಿ ಪಡ್ತೀರಾ 17-05-2022 8:57AM IST / No Comments / Posted In: Latest News, Live News, Special, Life Style ಕೆಂಪಿರುವೆಗಳು ವೃತ್ತದಲ್ಲಿ ಸುತ್ತುತ್ತಿರುವ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಇದನ್ನು ಕಂಡು ಬಳಕೆದಾರರು ಆಕರ್ಷಿತರಾಗಿದ್ದಾರೆ ಹಾಗೂ ಗೊಂದಲಕ್ಕೊಳಗಾಗಿದ್ದಾರೆ. ಇರುವೆಗಳು ತಮ್ಮ ಶಿಸ್ತಿಗೆ ಹೆಸರುವಾಸಿಯಾದ ಜೀವಿಗಳಾಗಿವೆ. ಇರುವೆಗಳ ಗುಂಪನ್ನು ನೋಡಿದಾಗಲೆಲ್ಲಾ, ಅವು ಯಾವಾಗಲೂ ಗುಂಪಿನಲ್ಲಿ ಕೆಲಸ ಮಾಡೋದನ್ನು ಕಾಣಬಹುದು. ಆಹಾರವನ್ನು ಹಿಡಿದುಕೊಂಡು ಅತ್ಯಂತ ಸಂಘಟಿತವಾಗಿ ಸಾಲಿನಲ್ಲಿ ಇವು ಸಂಚರಿಸುತ್ತವೆ. ಕೇವಲ ಆಹಾರ ಮಾತ್ರವಲ್ಲ, ಇರುವೆಗಳು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತವೆ. ಇವು ತಮ್ಮ ದೇಹದ ತೂಕದ 20 ಪಟ್ಟು ಹೆಚ್ಚು ತೂಕವನ್ನು ಹೊಂದಿರುತ್ತವೆ. ಅವು ಕೆಲಸದಲ್ಲಿ ತುಂಬಾ ಪ್ರಭಾವಶಾಲಿ ಮತ್ತು ಪರಿಣಾಮಕಾರಿಯಾಗಿರುತ್ತದೆ. ಆದರೆ, ಈ ವೈರಲ್ ವಿಡಿಯೋದಲ್ಲಿ ಇರುವೆಗಳು ವೃತ್ತಾಕಾರವಾಗಿ ಸಾವಿನ ಬಲೆಯಲ್ಲಿ ಸುತ್ತುತ್ತಿದೆ. ಕೆಲವು ಇರುವೆಗಳು ಸತ್ತು ಬಿದ್ದಿದ್ದರೆ, ಇನ್ನೂ ಕೆಲವು ವೃತ್ತಾಕಾರದಲ್ಲಿ ಸುತ್ತು ಬರುತ್ತಲೇ ಇವೆ. ಅವು ಬಳಲಿಕೆಯಿಂದ ಸಾಯೋವರೆಗೂ ಹೀಗೆ ಸುತ್ತುತ್ತಲೇ ಇರುತ್ತವೆ. ಬಹುಶಃ ವ್ಯತಿರಿಕ್ತ ಇರುವೆಗಳು ಮಾತ್ರ ಬದುಕುಳಿಯಬಹುದು. ಬಿಟ್‌ಕಾಯಿನ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಇರುವೆಗಳ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 318 ರೀಟ್ವೀಟ್‌ಗಳೊಂದಿಗೆ ಸಾಕಷ್ಟು ಗಮನ ಸೆಳೆದಿದೆ. ವಿಡಿಯೋ ನೋಡಿ ಅನೇಕ ಬಳಕೆದಾರರು ಅಚ್ಚರಿಗೊಂಡಿದ್ದಾರೆ. Army ants are blind and rely on pheromones to track the ones in front. If one ant intersects with its old trail then it results in a circular death trap where they spiral until they die from exhaustion. However, the contrarian army ants might survive. pic.twitter.com/ruQhtGUei9 — Bitcoin (@Bitcoin) April 12, 2022