ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಹಿರಿಯ ಪುತ್ರಿ ಮತ್ತು ಸಂಗೀತ ಸಂಯೋಜಕಿ ಖತೀಜಾ ರೆಹಮಾನ್ ಭಾನುವಾರ ರಿಯಾಸ್ದಿನ್ ಶೇಖ್ ಮೊಹಮ್ಮದ್ ಅವರೊಂದಿಗೆ ನಿಶ್ಚಿತಾರ್ಥವಾಗಿದ್ದಾರೆ.
20ರ ಹರೆಯದ ಖತೀಜಾ ರೆಹಮಾನ್ ಅವರು ಉದ್ಯಮಿ ಮತ್ತು ಆಡಿಯೋ ಇಂಜಿನಿಯರ್ ಮೊಹಮ್ಮದ್ ಅವರೊಂದಿಗೆ ತಮ್ಮ ಚಿತ್ರವನ್ನು ಕೊಲಾಜ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 2021ರ ಡಿಸೆಂಬರ್ 29 ರಂದು ಇವರಿಬ್ಬರ ನಿಶ್ಚಿತಾರ್ಥ ನಡೆದಿರುವ ಬಗ್ಗೆ ತಿಳಿಸಿದ್ದಾರೆ.
ತನ್ನ ಜನ್ಮದಿನದ ಡಿಸೆಂಬರ್ 29ರಂದು ನಿಕಟ ಕುಟುಂಬ ವರ್ಗ ಮತ್ತು ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ ಎಂದು ತಮ್ಮ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ, ಖತೀಜಾ ರೆಹಮಾನ್ ಅವರು ಕೃತಿ ಸನೋನ್ ಅಭಿನಯದ ಹಾಸ್ಯ ನಾಟಕ ‘ಮಿಮಿ’ಗಾಗಿ ರಾಕ್ ಎ ಬೈ ಬೇಬಿ ಎಂಬ ಹಾಡನ್ನು ಹಾಡಿದ್ದು, ಇದನ್ನು ಅವರ ತಂದೆ ಎ.ಆರ್. ರೆಹಮಾನ್ ಸಂಯೋಜಿಸಿದ್ದಾರೆ.