29 ದೇಶಗಳಲ್ಲಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ಅಮೆರಿಕದಲ್ಲಿ ಹುಟ್ಟಿಕೊಂಡಿದೆ ಎನ್ನಲಾದ ಲ್ಯಾಂಬ್ಡಾ ಹೆಸರಿನ ಕೋವಿಡ್ 19 ರೂಪಾಂತರಿ ವೈರಸ್ನ್ನು ಪತ್ತೆ ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ.
ಮೊಟ್ಟ ಮೊದಲ ಬಾರಿಗೆ ಪೆರುವಿನಲ್ಲಿ ಈ ಲ್ಯಾಂಬ್ಡಾ ರೂಪಾಂತರಿ ವೈರಸ್ ನ್ನು ಗುರುತಿಸಲಾಗಿದೆ ಎಂದು ಸಾಪ್ತಾಹಿಕ ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಪೆರುವಿನಲ್ಲಿ ಲ್ಯಾಂಬ್ಡಾ ಪ್ರಕರಣ ಮಿತಿಮೀರಿದೆ. ಏಪ್ರಿಲ್ ತಿಂಗಳಿನಿಂದ ವರದಿಯಾದ ಪ್ರಕರಣಗಳಲ್ಲಿ 81 ಪ್ರತಿಶತ ಕೇಸುಗಳು ಈ ಹೊಸ ರೂಪಾಂತರದೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗಿದೆ.
ಚಿಲಿ ದೇಶದಲ್ಲಿ ಕಳೆದ 60 ದಿನಗಳಲ್ಲಿ ಶೇಕಡಾ 32ರಷ್ಟು ಲ್ಯಾಂಬ್ಡಾ ರೂಪಾಂತರಿ ವರದಿಯಾಗಿದೆ. ಚಿಲಿಯಲ್ಲಿ, ಕಳೆದ 60 ದಿನಗಳಲ್ಲಿ ಸಲ್ಲಿಸಿದ ಎಲ್ಲಾ ಅನುಕ್ರಮಗಳಲ್ಲಿ ಇದು ಶೇಕಡಾ 32 ರಷ್ಟು ಪತ್ತೆಯಾಗಿದೆ ಮತ್ತು ಬ್ರೆಜಿಲ್‌ನಲ್ಲಿ ಮೊದಲು ಗುರುತಿಸಲ್ಪಟ್ಟ ಗಾಮಾ ರೂಪಾಂತರದಿಂದ ಮಾತ್ರ ಅದನ್ನು ಮೀರಿಸಲಾಗಿದೆ.
ಅರ್ಜೆಂಟೀನಾ ಮತ್ತು ಈಕ್ವೆಡಾರ್‌ನಂತಹ ಇತರ ದೇಶಗಳು ಸಹ ಹೊಸ ರೂಪಾಂತರದ ಹರಡುವಿಕೆಯನ್ನು ಹೆಚ್ಚಿಸಿವೆ ಎಂದು ವರದಿ ಮಾಡಿದೆ. ಈ ಲ್ಯಾಂಬ್ಡಾ ವೈರಸ್ ಮೊದಲ ಬಾರಿಗೆ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡ ಗಾಮಾ ರೂಪಾಂತರಿಯ ವರ್ಗೀಕರಣವಾಗಿದೆ. ಅರ್ಜೆಂಟಿನಾ ಹಾಗೂ ಈಕ್ವೆಡಾರ್ನಲ್ಲೂ ಹೊಸ ರೂಪಾಂತರಿಯ ಪತ್ತೆಯಾಗಿದೆ.
ಲ್ಯಾಂಬ್ಡಾ ರೂಪಾಂತರಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಕಲೆಹಾಕಲಾಗಿಲ್ಲ. ರೂಪಾಂತರಿಯ ಬಗ್ಗೆ ಹೆಚ್ಚಿನ ಅಧ್ಯಯನಗಳು ಮುಂದುವರಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.