ಕೆಲವರಿಗೆ ರೈಲ್ವೇ ಕ್ರಾಸಿಂಗ್ ನಲ್ಲಿ ರೈಲು ಪಾಸ್ ಆಗೋದನ್ನು ಕಾಯೋವಷ್ಟು ತಾಳ್ಮೆ ಇರೋದಿಲ್ಲ ಅನಿಸುತ್ತದೆ. ಅದೆಷ್ಟೋ ಮಂದಿ ತಮ್ಮ ಅವಸರದಿಂದಲೇ ಅಪಾಯಕ್ಕೊಳಗಾಗಿದ್ದಾರೆ.
ಇದೀಗ ವೈರಲ್ ಆಗಿರುವ ಭಯಾನಕ ಘಟನೆಯೊಂದರಲ್ಲಿ, ರೈಲು ಬರುವಷ್ಟರಲ್ಲಿ ರೈಲ್ವೇ ಕ್ರಾಸಿಂಗ್‌ನಲ್ಲಿ ಪ್ರಯಾಣಿಕರ ಬೈಕ್ ಹಳಿಯಲ್ಲಿ ಸಿಲುಕಿಕೊಂಡಿದೆ. ಘಟನೆಯ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಹೌದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್‌ನೊಂದಿಗೆ ರೈಲ್ವೇ ಹಳಿ ದಾಟಲು ಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಬೈಕ್ ಹಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ರೈಲು ಸಮೀಪಿಸುವ ಮೊದಲು ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ.
ತನ್ನನ್ನು ತಾನು ಅಪಾಯದಿಂದ ಬಚಾವ್ ಮಾಡಿಕೊಂಡ ಆತ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಹಿಂದಕ್ಕೆ ಓಡಿಬಂದಿದ್ದಾನೆ. ವೇಗವಾಗಿ ಬಂದ ರೈಲು ಬೈಕ್ ಅನ್ನು ಪೀಸ್ ಪೀಸ್ ಮಾಡುತ್ತಾ ಮುಂದೆ ಸಾಗಿದೆ.
ಪ್ರಯಾಣಿಕರೊಬ್ಬರ ಬೈಕ್ ಇಟಾವಾದಲ್ಲಿ ರೈಲ್ವೇ ಕ್ರಾಸಿಂಗ್ ಟ್ರ್ಯಾಕ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ. ರೈಲು ಹಾದುಹೋಗುವ ಮೂಲಕ ಬೈಕ್ ಹಾರಿಹೋಗಿದೆ, ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವ್ಯಕ್ತಿಯನ್ನು ದೂಷಿಸಿದ್ದಾರೆ.
https://twitter.com/AhmedKhabeer_/status/1564339758993534976?ref_src=twsrc%5Etfw%7Ctwcamp%5Etweetembed%7Ctwterm%5E1564339758993534976%7Ctwgr%5E540430e699bedf715acfce7b74c5c68335674ef9%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-narrow-escape-for-man-as-his-bike-stuck-on-railway-track-gets-blown-into-pieces-by-speeding-train-5854303.html