ನಿರ್ಮಾಣ ಹಂತದ ಕಟ್ಟಡದಿಂದ ಕಾಲು ಜಾರಿ ಬಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಮಿಳುನಾಡು ಮೂಲದ 42 ವರ್ಷದ ಏಳುಮಲೈ, ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ನಗರದ ನಾಗರಬಾವಿಯ ಎನ್ಜಿಎಫ್ ಲೇಔಟ್ ನಲ್ಲಿ, ಮಾರ್ಚ್ ಏಳನೇ ತಾರೀಖಿನಂದು ಈ ಘಟನೆ ನಡೆದಿದೆ. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಏಳುಮಲೈ, ಅಂದು ಸಹ ಕೆಲಸದಲ್ಲಿ ನಿಮಿತ್ತರಾಗಿದ್ದರು. ತನ್ನ ಕೆಲಸ ಮುಗಿಸಿದ ಅವರು ಸಹೋದ್ಯೋಗಿಗಳ ಬಳಿ ಮಾತನಾಡಿ, ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮೆಟ್ಟಿಲನ್ನು ಬಳಸಿ ಇಳಿಯುತ್ತಿದ್ದರು, ಈ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.
WAR BREAKING: ಯುದ್ಧ ಟ್ಯಾಂಕರ್ ನಿಂದ ಏಕಕಾಲದಲ್ಲಿ ಹಾರಿದ 40 ಮಿಸೈಲ್; ಖಾರ್ಕಿವ್ ನಲ್ಲಿ ಮೂರು ಮಕ್ಕಳು ಸೇರಿ 7 ಜನ ಸಾವು; ಬಂಕರ್ ನಲ್ಲಿ ಆಶ್ರಯ ಪಡೆಯಲು ಸೂಚನೆ
ಮೆಟ್ಟಿಲಿನಿಂದ ಕೆಳಗೆ ಬಿದ್ದ ಕಾರಣ ಏಳುಮಲೈ ಅವರ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ, ಆದರೆ ಚಿಕಿತ್ಸೆ ಫಲಿಸದೇ ಏಳುಮಲೈ ಸಾವನ್ನಪ್ಪಿದ್ದಾರೆ.
ಇನ್ನು ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಟ್ಟಡ ಮಾಲೀಕರಾದ ಮುನಿರಾಜು ಬಾಬು, ಶಿವಶಂಕರ್ ಚೌಧರಿ, ಕಾಂಟ್ರ್ಯಾಕ್ಟರ್ ಗಳಾದ ಶಕ್ತಿವೇಲು ಹಾಗೂ ವಡಿವೇಲು ವಿರುದ್ಧ ಎಫ್ಐಆರ್ ದಾಖಲಾಗಿದೆ.