ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧ ಹೋರಾಡಲು ನಿರ್ಭಯಾ ನಿಧಿಯಡಿ ಮುಂಬೈ ಪೊಲೀಸರು ಖರೀದಿಸಿದ ವಾಹನಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಶಾಸಕರು ಮತ್ತು ಸಂಸದರಿಗೆ ವೈ-ಪ್ಲಸ್ ಭದ್ರತೆ ಒದಗಿಸಲು ಬಳಸಲಾಗುತ್ತಿದೆ!
ಈ ವರ್ಷದ ಜೂನ್‌ನಲ್ಲಿ ಮುಂಬೈ ಪೊಲೀಸ್ ಪಡಯು, ನಿರ್ಭಯಾ ನಿಧಿಯಡಿ 30 ಕೋಟಿ ರೂಪಾಯಿಯ 220 ಬೊಲೆರೋಗಳು, 35 ಎರ್ಟಿಗಾಸ್, 313 ಪಲ್ಸರ್ ಮೋಟಾರ್‌ಸೈಕಲ್ ಮತ್ತು 200 ಆಕ್ಟಿವಾ ದ್ವಿಚಕ್ರ ವಾಹನಗಳನ್ನು ಖರೀದಿಸಿತ್ತು. ಇದನ್ನು ಈಗ ಭದ್ರತೆಗೆ ಬಳಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಶಿಂಧೆ ನೇತೃತ್ವದ ಸರ್ಕಾರದ ಮೇಲೆ ಈಗ ವಾಗ್ದಾಳಿ ನಡೆಸುತ್ತಿದೆ. ಮಹಿಳೆಯರ ರಕ್ಷಣೆಗಿಂತ ಆಡಳಿತ ಶಾಸಕರ ಭದ್ರತೆ ಮುಖ್ಯವೇ ಎಂದು ಅವರು ಪ್ರಶ್ನಿಸುತ್ತಿದ್ದಾರೆ.
ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸಲು 2013 ರಿಂದ ನಿರ್ಭಯಾ ನಿಧಿಯನ್ನು ಕೇಂದ್ರವು ರಾಜ್ಯ ಸರ್ಕಾರಗಳಿಗೆ ನೀಡುತ್ತಿದೆ. ಜೂನ್‌ನಲ್ಲಿ ವಾಹನಗಳನ್ನು ಖರೀದಿಸಿದ ನಂತರ, ಜುಲೈನಲ್ಲಿ ಎಲ್ಲಾ 97 ಪೊಲೀಸ್ ಠಾಣೆಗಳು, ಸೈಬರ್, ಟ್ರಾಫಿಕ್ ಮತ್ತು ಕರಾವಳಿ ಪೊಲೀಸ್ ಘಟಕಗಳಿಗೆ ವಿತರಿಸಲಾಯಿತು, ”ಎಂದು ಅಧಿಕಾರಿ ಹೇಳಿದರು.