ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಕಲಿಯುವುದು ಮತ್ತು ಪ್ರಶಂಸಿಸುವುದನ್ನು ನೋಡಿದ್ರೆ ಭಾರತೀಯರಿಗೆ ಬಹಳ ಸಂತೋಷ ಕೊಡುವ ವಿಚಾರ. ಹಲವಾರು ಮಂದಿ ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ಹಾಗೆಯೇ ಇಲ್ಲಿನ ಪ್ರಾದೇಶಿಕ ಭಾಷೆಗಳನ್ನು ಕೂಡ ಕಲಿತು ಮಾತನಾಡುತ್ತಾರೆ.
ಇದೀಗ, ಅಮೆರಿಕಾದ ಯೂಟ್ಯೂಬರ್ ಗುಜರಾತಿ ಭಾಷೆ ಮಾತನಾಡುವ ಮೂಲಕ ನಮ್ಮ ಹೃದಯಕ್ಕೆ ಲಗ್ಗೆಯಿಟ್ಟಿದ್ದಾರೆ. ಸ್ಮಿತ್ ಎಂಬ ಅಮೆರಿಕಾ ಮೂಲದ ಯೂಟ್ಯೂಬರ್, ಗುಜರಾತಿ ರೆಸ್ಟೋರೆಂಟ್‌ನಲ್ಲಿ ಮಾಲೀಕರೊಂದಿಗೆ ಮಾತನಾಡುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ಮಿತ್ ಗುಜರಾತಿ ಭಾಷೆಯಲ್ಲಿ ಊಟವನ್ನು ಕೇಳುವ ಮೂಲಕ ಮಾಲೀಕರನ್ನು ಆಶ್ಚರ್ಯಗೊಳಿಸಿದ್ದಾರೆ.
ಸ್ಮಿತ್ ನಿರರ್ಗಳವಾಗಿ ಗುಜರಾತಿ ಭಾಷೆಯಲ್ಲಿ ಮಾತನಾಡುವುದನ್ನು ಕಂಡ ಮಾಲೀಕರು ಅಚ್ಚರಿಗೊಂಡಿದ್ದಲ್ಲದೆ ಬಹಳ ಸಂತೋಷಪಟ್ಟಿದ್ದಾರೆ. ಎಲ್ಲಿ ಈ ಭಾಷೆಯನ್ನು ಕಲಿತಿದ್ದೀರಿ ಹಾಗೂ ಗುಜರಾತಿ ಖಾದ್ಯಗಳ ರುಚಿ ನೋಡಿದ್ದೀರಾ ಎಂದು ಕೇಳಿದ್ದಾರೆ.
ಮಾಲೀಕರು ನಂತರ ಅವರಿಗೆ ಸಾಂಪ್ರದಾಯಿಕ ಥಾಲಿಯನ್ನು ಬಡಿಸಿದ್ದಾರೆ. ಊಟವನ್ನು ಸ್ಮಿತ್ ಸಂಪೂರ್ಣವಾಗಿ ಆನಂದಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕರು ಅವರಿಗೆ ಉಚಿತವಾಗಿ ಆಹಾರ ಒದಗಿಸಿದ್ದಾರೆ. ಇದಲ್ಲದೆ, ಅವರು ಅನೇಕ ಭಾರತೀಯ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದು, ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸ್ಮಿತ್ ಅವರ ಗುಜರಾತಿ ಮಾತನಾಡುವ ಕೌಶಲ್ಯಕ್ಕೆ ಭಾರತೀಯರು ಬೆರಗಾಗಿದ್ದಾರೆ.