ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದ ವಿಮಾನ: ಪೈಲಟ್ ಪಾರು 28-04-2022 7:46AM IST / No Comments / Posted In: Latest News, Live News, International ಕ್ಯಾಲಿಫೋರ್ನಿಯಾದ ಇಬ್ಬರು ವ್ಯಕ್ತಿಗಳು ಅರಿಝೋನಾ ಆಕಾಶದ ಮೇಲೆ ತಮ್ಮ ಪ್ಲೇನ್ ಸ್ವಾಪ್ ಮೂಲಕ ಇತಿಹಾಸ ಬರೆಯಲು ಮುಂದಾಗಿದ್ದರು. ಆದರೆ, ಅವರ ಈ ಪ್ರಯತ್ನವು ವಿಫಲವಾಗಿದ್ದು, ಇದರ ದೃಶ್ಯಾವಳಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಎರಡು ವಿಮಾನಗಳು ಒಂದಕ್ಕೊಂದು ಹತ್ತಿರವಾಗುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ವಿಮಾನ ಓರೆಯಾಗುತ್ತಿದ್ದಂತೆ, ಪೈಲಟ್‌ಗಳಲ್ಲಿ ಒಬ್ಬರು ಆಕಾಶಕ್ಕೆ ಧುಮುಕಿದ್ದಾರೆ. ಒಂದು ವಿಮಾನ ನಿಯಂತ್ರಣದಲ್ಲಿರುವಂತೆ ತೋರುತ್ತಿದ್ದರೆ, ಇನ್ನೊಂದು ವಿಮಾನ ನಿಯಂತ್ರಣವನ್ನು ಕಳೆದುಕೊಂಡಿದೆ. ಪೈಲಟ್‌ಗಳಲ್ಲಿ ಒಬ್ಬರು, ಲ್ಯೂಕ್ ಐಕಿನ್ಸ್, ವಿಮಾನದ ಕಾಕ್‌ಪಿಟ್‌ನೊಳಗೆ ಕಾಣಿಸಿಕೊಂಡರೆ, ಇನ್ನೊಬ್ಬರು ಫಾರಿಂಗ್‌ಟನ್ ಪ್ಯಾರಾಚೂಟ್ ಮುಖಾಂತರ ಸುರಕ್ಷಿತವಾಗಿ ಇಳಿದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎನರ್ಜಿ ಡ್ರಿಂಕ್ ಕಂಪನಿ ರೆಡ್ ಬುಲ್ ಪ್ರಾಯೋಜಿಸಿದ ಈವೆಂಟ್ ಅನ್ನು ಕಸ್ಟಮ್-ನಿರ್ಮಿತ ಏರ್‌ಬ್ರೇಕ್‌ಗಳನ್ನು ಅವಲಂಬಿಸಿ ಯೋಜಿಸಲಾಗಿದೆ. ವರದಿ ಪ್ರಕಾರ, ಕ್ಯಾಲಿಫೋರ್ನಿಯಾದ ಆಕಾಶದ ಸ್ಯಾನ್ ಲೂಯಿಸ್ ಒಬಿಸ್ಪೋದಲ್ಲಿ ಬ್ರೇಕ್ ಅನ್ನು ಹಲವು ಬಾರಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಪರೀಕ್ಷಿಸಲಾಗಿದೆ. ಈವೆಂಟ್‌ನ ಸಂಘಟಕರು ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ ನಂತರ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತನಿಖೆಯನ್ನು ಪ್ರಾರಂಭಿಸಿದೆ. This #RedBull #PlaneSwap in Arizona was crazy! Didn't go as planned but luckily everyone is alright! pic.twitter.com/f9cpRclYtT — Aaron Tevis (@AaronTevis) April 25, 2022