
ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ. ನಿಮ್ಮ ಮನದರಸಿಯನ್ನು ಹೇಗೆ ಒಲಿಸಿಕೊಳ್ಳುವುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಹುಡುಗಿಯರಿಗೆ ಯಾವುದು ಇಷ್ಟವಾಗುತ್ತದೆ ಮತ್ತು ಯಾವುದು ಇಷ್ಟವಾಗುವುದಿಲ್ಲ ಎಂಬ ಕೆಲವು ಸಲಹೆಗಳು ಇಲ್ಲಿವೆ ಕೇಳಿ.
ಮಹಿಳೆಯರು ಬಾಹ್ಯ ಸೌಂದರ್ಯಕ್ಕೆ ಆದ್ಯತೆ ಕೊಡುತ್ತಾರೆ ಎಂಬುದೇನೋ ನಿಜ. ಆದರೆ ಅತಿಯಾದ ವ್ಯಾಯಾಮ ಮಾಡುವ, ದೇಹದಾಢ್ಯ ಪಟುವಿನಂಥ ದೇಹ ಹೊಂದಿರುವ ಪುರುಷರು ಇಷ್ಟವಾಗುವುದು ಕಡಿಮೆ. ಅದೇ ರೀತಿ ಅತಿಯಾಗಿ ಬೊಜ್ಜು ಬೆಳೆಸಿಕೊಂಡವರೂ ಈಗಿನ ಹುಡುಗಿಯರಿಗೆ ಇಷ್ಟವಾಗುವುದಿಲ್ಲ.
ಕೆಲವು ಸಿನೆಮಾಗಳಲ್ಲಿ, ಒರಟಾದ, ದುರ್ವ್ಯಸನಿ ನಾಯಕನನ್ನು ನಾಯಕಿ ಪ್ರೀತಿಸಿ ಬದಲಾಯಿಸುವುದನ್ನು ನೀವು ನೋಡಿರಬಹುದು. ಆದರೆ ಇದು ನಿಜ ಜೀವನದಲ್ಲಿ ನಡೆಯುವುದಿಲ್ಲ. ಸೂಕ್ಷ್ಮ ಸ್ವಭಾವದ ಇಂದಿನ ಹುಡುಗಿಯರಿಗೆ ತಮ್ಮನ್ನು ಅರ್ಥ ಮಾಡಿಕೊಳ್ಳುವ, ಹೇಳದೆಯೇ ಎಲ್ಲವನ್ನೂ ತಿಳಿದುಕೊಳ್ಳುವ ಹುಡುಗರು ಇಷ್ಟವಾಗುತ್ತಾರೆ.
ಒರಟು ಸ್ವಭಾವದ ಹುಡುಗರನ್ನು ಇಷ್ಟಪಡುವವರು ಕಡಿಮೆ. ಸದಾ ಮಹಿಳೆಯರನ್ನು ದೂಷಿಸುತ್ತಾ, ಅವರ ಬಗ್ಗೆ ಕೀಳಾಗಿ ಮಾತನಾಡುವವರನ್ನು ಹತ್ತಿರವೂ ಸೇರಿಸಿಕೊಳ್ಳುವುದಿಲ್ಲ. ಅದೇ ರೀತಿ ಸಿರಿವಂತರೆಂದು ತೋರಿಸಿಕೊಳ್ಳುವ, ಸದಾ ಸಿಡುಕುವ ಪುರುಷರನ್ನು ದೂರವಿಡುವುದೇ ಹೆಚ್ಚು.