alex Certify ನಿಮ್ಮ ಲೈಂಗಿಕ ಬದುಕಿಗೂ ಅಡ್ಡಿಯಾಗುತ್ತದೆ ಈ ʼಸಕ್ಕರೆ ಖಾಯಿಲೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಲೈಂಗಿಕ ಬದುಕಿಗೂ ಅಡ್ಡಿಯಾಗುತ್ತದೆ ಈ ʼಸಕ್ಕರೆ ಖಾಯಿಲೆʼ

ಮಧುಮೇಹದಂತಹ ದೀರ್ಘಕಾಲ ಕಾಡುವ ಖಾಯಿಲೆಗಳು ಲೈಂಗಿಕ ಬದುಕಿಗೂ ಅಡ್ಡಿಯಾಗುತ್ತವೆ. ಆರೋಗ್ಯಕರ ಬದುಕಿಗೆ ಪೂರಕವಾದ ನಿಮ್ಮ ಆಹ್ಲಾದಕರ ಕ್ಷಣಗಳಿಗೆ ಮಧುಮೇಹ ಅಪಾಯಕಾರಿಯಾಗಿ ಪರಿಣಮಿಸಬಹುದು.

ಸಕ್ಕರೆ ಖಾಯಿಲೆ ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಪುರುಷ ಹಾಗೂ ಮಹಿಳೆ ಇಬ್ಬರಿಗೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮಧುಮೇಹದಿಂದ ಬಳಲುತ್ತಿರುವವರಲ್ಲಿ ಸಾಮೀಪ್ಯವನ್ನು ಪಡೆಯುವ ಬಗ್ಗೆ ಹೆಚ್ಚಿನ ಪ್ರಚೋದನಕಾರಿ ಮನಸ್ಥಿತಿ ಇರುವುದಿಲ್ಲ. ಮಧುಮೇಹದ ಪರಿಣಾಮ ಹಾಗೂ ಅದಕ್ಕೆ ತೆಗೆದುಕೊಳ್ಳುತ್ತಿರುವ ಔಷಧಗಳಿಂದಾಗಿ ಅವರಲ್ಲಿ ಕಾಮೋತ್ಸಾಹವೇ ತಗ್ಗಿ ಹೋಗುತ್ತದೆ. ರಕ್ತದೊತ್ತಡ ನಿಯಂತ್ರಣ ಹಾಗೂ ಮಧುಮೇಹದ ತೊಡಕುಗಳಲ್ಲಿ ಒಂದಾದ ಖಿನ್ನತೆಗೆ ಚಿಕಿತ್ಸೆ ನೀಡಲು ಕೊಡುವ ಔಷಧಗಳು ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತವೆ.

ಮಧುಮೇಹಿಗಳಲ್ಲಿ ನರರೋಗ ಸಹ ಕಾಣಿಸಿಕೊಳ್ಳುತ್ತದೆ. ನರಗಳ ಮರಗಟ್ಟುವಿಕೆ ಮತ್ತು ಜನನಾಂಗಗಳಲ್ಲಿ ಸಂವೇದನೆಗಳ ಕೊರತೆಯನ್ನು ಉಂಟು ಮಾಡುತ್ತದೆ. ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗಲು ಇದು ಸಹ ಕಾರಣವಾಗಿದೆ. ಪುರುಷರಿಗೆ ಸಂಭೋಗದ ಸಮಯದಲ್ಲಿ ಒಂದು ರೀತಿಯ ಅಸಮರ್ಥತೆ ಕಾಡಬಹುದು.

ಮಧುಮೇಹ ಹೊಂದಿರುವ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಲೈಂಗಿಕ ಸಮಸ್ಯೆ ಎಂದರೆ ಯೋನಿ ಶುಷ್ಕತೆ. ದೇಹದಲ್ಲಿನ ಹಾರ್ಮೋನುಗಳ ಅಸಮತೋಲನ ಮತ್ತು ಜನನಾಂಗಗಳಿಗೆ ರಕ್ತದ ಹರಿವು ಕಡಿಮೆಯಾದ ಕಾರಣ ಇದು ಸಂಭವಿಸುತ್ತದೆ. ಇದಲ್ಲದೆ ಮಹಿಳೆಯರು ಉರಿಯೂತ ಮತ್ತು ಯೋನಿ ಸೋಂಕನ್ನು ಅನುಭವಿಸುತ್ತಾರೆ. ಮಹಿಳೆಯರಿಗೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಮೂತ್ರ ವಿಸರ್ಜನೆಯಾಗುವ ಸಾಧ್ಯತೆಯೂ ಇರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...