ಮೇಷ : ಕಚೇರಿ ಕೆಲಸದಲ್ಲಿ ಉತ್ತಮ ಫಲಿತಾಂಶ ಕಾಣಲಿದೆ. ಇದರಿಂದ ಮೇಲಾಧಿಕಾರಿಗಳು ನಿಮಗೆ ಮೆಚ್ಚುಗೆ ಸೂಚಿಸಲಿದ್ದಾರೆ. ವಿದ್ಯಾರ್ಥಿಗಳು ಪ್ರಯತ್ನ ಪಟ್ಟಷ್ಟೇ ಲಾಭ ಪಡೆಯಲಿದ್ದಾರೆ. ವ್ಯಾಪಾರಸ್ಥರಿಗೆ ಈ ದಿನ ಅನುಕೂಲ. ಕೃಷಿಕರು ಕೊಂಚ ನಷ್ಟ ಅನುಭವಿಸಬಹುದು.
ವೃಷಭ : ದಾಂಪತ್ಯ ಜೀವನದಲ್ಲಿ ಏರುಪೇರು ಉಂಟಾಗಲಿದೆ. ಹಣ ಸಂಪಾದನೆ ಮಾಡಲು ಹೊಸ ಮಾರ್ಗ ಹುಡುಕುವಿರಿ. ವ್ಯಾಪಾರಸ್ಥರಿಗೆ ಈ ದಿನ ಶುಭಕರವಾಗಿರಲಿದೆ. ಪೋಷಕರ ಆರೋಗ್ಯದಲ್ಲಿ ಏರು ಪೇರು ಉಂಟಾಗಬಹುದು.
ಮಿಥುನ : ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ವ್ಯಕ್ತವಾಗಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇದರಿಂದ ನೀವು ಗಾಬರಿಗೆ ಒಳಗಾಗುವಿರಿ. ಉದ್ಯೋಗಸ್ಥರಿಗೆ ಈ ದಿನ ಕಿರಿಕಿರಿ ಇರಲಿದೆ.
ಕಟಕ : ವ್ಯಾಪಾರಸ್ಥರಿಗೆ ಈ ದಿನ ನಿರಾಶಾದಾಯಕವಾಗಿರಲಿದೆ. ಪೋಷಕರೊಂದಿಗೆ ಕೆಲ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಬಹುದು. ಸಂಬಳ ನಂಬಿ ಜೀವನ ನಡೆಸುವವರಿಗೆ ಆರ್ಥಿಕ ಸಂಕಷ್ಟ ಉಂಟಾಗಲಿದೆ.
ಸಿಂಹ : ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಯೋಗವಿದೆ. ಪೋಷಕರಿಗೆ ಇದರಿಂದ ಖರ್ಚು ಹೆಚ್ಚಾಗಬಹುದು. ಮನೆಯಲ್ಲಿ ಇಂದು ಧಾರ್ಮಿಕ ಕಾರ್ಯ ನಡೆಯಲಿದೆ. ಸಂಗಾತಿಯು ನಿಮ್ಮೊಂದಿಗೆ ಮುನಿಸಿಕೊಳ್ಳಲಿದ್ದಾರೆ. ಇನ್ನಾದರೂ ಸಂಗಾತಿಯ ಕಡೆಗೆ ಹೆಚ್ಚಿನ ಗಮನ ನೀಡಿ.
ಕನ್ಯಾ : ಪ್ರೇಮ ಸಂಬಂಧವು ವಿವಾಹ ಬಂಧವಾಗಿ ಮಾರ್ಪಾಡಾಗುವ ದಿನ ಸಮೀಪಿಸುತ್ತಿದೆ. ಜವಳಿ ವ್ಯಾಪಾರಿಗಳಿಗೆ ಇದು ಶುಭ ದಿನ. ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಮಾತಿದೆ. ಅದರಂತೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.
ತುಲಾ : ನಿಮ್ಮ ಸಂಭಾಷಣೆ ಉತ್ತಮವಾಗಿದೆ. ಹೀಗಾಗಿ ಎಂತಹ ಕಠಿಣ ಸ್ಥಿತಿಯನ್ನು ನಿಮ್ಮ ಮಾತಿನಲ್ಲಿಯೇ ನಿಭಾಯಿಸಬಲ್ಲಿರಿ. ಹೊಸ ಉದ್ಯಮ ಆರಂಭಿಸುವವರಿಗೆ ಇದು ಉತ್ತಮ ದಿನ.
ವೃಶ್ಚಿಕ : ಸಂಗಾತಿಯಿಂದಾಗಿ ನಿಮ್ಮ ಜೀವನ ಶೈಲಿಯೇ ಬದಲಾಗಲಿದೆ. ನಿಮ್ಮ ಈ ಬದಲಾವಣೆ ಪೋಷಕರ ಮನಸ್ಸಿಗೆ ನೋವುಂಟು ಮಾಡಬಹುದು. ಹಣ ಸಂಪಾದನೆಗೆ ಎಂದಿಗೂ ಅಡ್ಡದಾರಿ ಹಿಡಿಯಬೇಡಿ.
ಧನು : ಶಿಕ್ಷಕರಿಗೆ ಇಂದು ಕೆಲಸದ ಒತ್ತಡ ಹೆಚ್ಚಿರಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಲಾಭವಿದೆ. ಮಕ್ಕಳು ಓದಿನ ಕಡೆಗೆ ಕಡಿಮೆ ಗಮನ ನೀಡಲಿದ್ದಾರೆ. ಇದರಿಂದ ನಿರಾಳತೆ ಅನುಭವಿಸಲಿದ್ದೀರಿ. ಹೊಸ ಉದ್ಯಮ ಆರಂಭಿಸುವಿರಿ.
ಮಕರ : ಅಂದುಕೊಂಡ ಕಾರ್ಯದಲ್ಲಿ ವಿವಿಧ ಹಂತಗಳಲ್ಲಿ ತೊಂದರೆ ಎದುರಾಗಲಿದೆ. ಇದರಿಂದ ನಿಮ್ಮ ಮನಸ್ಸಿಗೆ ನೋವುಂಟಾಗಲಿದೆ. ಹಣದ ಕೊರತೆಯಿಂದಾಗಿ ಮನೆ ನಿರ್ಮಾಣ ಕಾರ್ಯ ಕುಂಠಿತವಾಗಲಿದೆ. ಪೋಷಕರು ನಿಮಗೆ ಧೈರ್ಯ ತುಂಬಲಿದ್ದಾರೆ.
ಕುಂಭ : ಬಹಳ ದಿನಗಳ ಬಳಿಕ ನಿಮ್ಮ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಕೆಲಸದ ನಿಮಿತ್ತ ವಿದೇಶದಲ್ಲಿದ್ದ ನಿಮ್ಮ ಸಂಗಾತಿಯು ಇಂದು ವಾಪಸ್ಸಾಗುವ ಮೂಲಕ ನಿಮಗೆ ಬಹುದೊಡ್ಡ ಸಪ್ರೈಸ್ ನೀಡಲಿದ್ದಾರೆ. ವ್ಯಾಪಾರ ಯೋಜನೆಗಳಲ್ಲಿ ಕೇಡು ಅನುಭವಿಸುವಿರಿ.
ಮೀನ : ವಾಣಿಜ್ಯ ವ್ಯವಹಾರದಲ್ಲಿ ಬಹುದೊಡ್ಡ ಲಾಭವಿದೆ. ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ಸ್ಥಾನ ಲಭಿಸಲಿದೆ. ಸಹೋದ್ಯೋಗಿಗಳಿಗೆ ನಿಮ್ಮಿಂದ ಉಪಕಾರವಾಗಲಿದೆ. ನಿಮಗಿಂತ ಕೆಳ ಹುದ್ದೆಯವರ ಮೇಲೆ ಎಂದಿಗೂ ದರ್ಪ ತೋರಬೇಡಿ.