ಎಲ್ಲಾ ಕಡೆ ದೇಹದ ಆರೋಗ್ಯದ ಬಗ್ಗೆ ಮಾತ್ರ ಕೇಳಿರ್ತೀವಿ. ಪುಸ್ತಕ, ಬ್ಲಾಗ್, ಟಿವಿ ಎಲ್ಲಿ ನೋಡಿದ್ರೂ ದೈಹಿಕ ಫಿಟ್ನೆಸ್ ಬಗ್ಗೆ ಮಾತ್ರ ಮಾಹಿತಿಗಳಿರುತ್ತವೆ. ಮೆದುಳಿನ ಆರೋಗ್ಯದ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ಈ ಸೂಪರ್ ಫಾಸ್ಟ್ ಬದುಕಿನಲ್ಲಿ ನಿಮ್ಮ ಮನಸ್ಸು ಸಾಕಷ್ಟು ಒತ್ತಡದಿಂದ ಕೂಡಿರುತ್ತದೆ. ಹಾಗಾಗಿ ನಿಮ್ಮ ದಿನನಿತ್ಯದ ಅಭ್ಯಾಸಗಳಿಂದ ಮೆದುಳಿಗೆ ಹಾನಿಯಾಗುವ ಅಪಾಯವಿರುತ್ತದೆ.
ನಿದ್ದೆಯ ಕೊರತೆ : ಚೆನ್ನಾಗಿ ನಿದ್ದೆ ಮಾಡದೇ ಇದ್ದರೆ ನಿಮ್ಮ ದೇಹವು ಆಯಾಸವನ್ನು ಅನುಭವಿಸುತ್ತದೆ. ನಿಮ್ಮ ಮನಸ್ಸಿನ ಕಾರ್ಯವಿಧಾನದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಪುನರಾವರ್ತಿತ ನಿದ್ರೆಯ ಅಭಾವದಿಂದ ನಿಮ್ಮ ಮೆದುಳು ಮತ್ತು ಸ್ಮರಣೆಯ ಮೇಲೆ ಆಳವಾದ ಪರಿಣಾಮ ಉಂಟಾಗುತ್ತದೆ.
ಅತಿಯಾದ ಉಪ್ಪು ಸೇವನೆ: ಜಾಸ್ತಿ ಉಪ್ಪು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದರಿಂದ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವಿರುತ್ತದೆ. ಇದರಿಂದ ಮೆದುಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
ಶಬ್ಧ ಮಾಲಿನ್ಯ: ನೀವು ಶಬ್ದ ಮಾಲಿನ್ಯದಿಂದಲೂ ದೂರವಿರಲು ಪ್ರಯತ್ನಿಸಬೇಕು. ನಿಮ್ಮ ಕಿವಿಗಳಿಗೆ ಅಪ್ಪಳಿಸುವ ಅತಿಯಾದ ಶಬ್ದ ನಿಮ್ಮ ಮೆದುಳಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ.
ಏಕಾಂಗಿತನ: ನಿಮ್ಮ ಮನಸ್ಸಿನ ಭಾವನೆ, ತುಮುಲಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಎಲ್ಲವನ್ನೂ ನಿಮ್ಮೊಳಗೇ ಇಟ್ಟುಕೊಂಡರೆ ಒತ್ತಡ ಹೆಚ್ಚಾಗುತ್ತದೆ. ನೋವು, ಟೆನ್ಷನ್ ಏನೇ ಇದ್ದರೂ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸು ಶಾಂತವಾಗುತ್ತದೆ. ಮೆದುಳಿನ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.