ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒತ್ತಡದಲ್ಲೇ ಬದುಕ್ತಿದ್ದಾರೆ. ಕೆಲಸ, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಗಟ್ಟು ಹೀಗೆ ಒಂದಿಲ್ಲೊಂದು ಸಮಸ್ಯೆ ಜನರನ್ನು ಕಾಡುತ್ತಿದೆ. ಒತ್ತಡವು ಪ್ರತಿಯೊಬ್ಬರ ಜೀವನದ ಭಾಗವಾಗಿಬಿಟ್ಟಿದೆ. ಒತ್ತಡವನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮನಸ್ಥಿತಿ ಕೆಟ್ಟದಾಗಿದ್ದರೆ ಯಾವ ಕೆಲಸವನ್ನೂ ಸರಿಯಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮನಸ್ಥಿತಿಯನ್ನು ಸರಿಪಡಿಸುವುದು ಬಹಳ ಮುಖ್ಯ. ನಿಮ್ಮ ಮೂಡ್ ಕೆಟ್ಟಾಗ ಅಥವಾ ಮನಸ್ಥಿತಿ ಸರಿಯಿಲ್ಲದೇ ಇದ್ದಾಗ ನೀವು ಕೆಲವು ಹಣ್ಣುಗಳನ್ನು ಸೇವಿಸಬಹುದು. ಈ ಹಣ್ಣುಗಳು ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡುತ್ತವೆ.
ಬಾಳೆಹಣ್ಣು
ಬಾಳೆಹಣ್ಣು ಫೈಬರ್ ಮತ್ತು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಆರೋಗ್ಯಕ್ಕೆ ಬೇಕಾದ ವಿಟಮಿನ್ ಬಿ 6 ಸಹ ಇದರಲ್ಲಿದೆ. ಬಾಳೆಹಣ್ಣು ತಿನ್ನುವುದರಿಂದ ನಮ್ಮ ಮನಸ್ಥಿತಿ ಸುಧಾರಿಸುತ್ತದೆ.
ಏಪ್ರಿಕಾಟ್
ಏಪ್ರಿಕಾಟ್‌ಗಳು ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿವೆ. ಇವೆರಡೂ ಮನಸ್ಥಿತಿಯನ್ನು ಸುಧಾರಿಸಲು ಕೆಲಸ ಮಾಡುತ್ತವೆ. ಆದ್ದರಿಂದ ಮೂಡ್ ಕೆಟ್ಟಿರುವಾಗ ಇದನ್ನು ಸೇವಿಸಬಹುದು.
ನಿಂಬೆಹಣ್ಣು
ನಿಂಬೆ ವಿಟಮಿನ್ ಸಿಯ ದೊಡ್ಡ ಮೂಲವಾಗಿದೆ. ನಮ್ಮ ಮೂಡ್ ಸರಿಪಡಿಸಲು ಬೇಕಾದ ಅಂಶಗಳು ನಿಂಬೆಯಲ್ಲಿವೆ. ಹಾಗಾಗಿ ನೀವು ಒತ್ತಡ ಬೇಸರದಲ್ಲಿದ್ದಾಗ ನಿಂಬೆ ಜ್ಯೂಸ್ ಮಾಡಿ ಕುಡಿಯಬಹುದು.
ಕಲ್ಲಂಗಡಿ
ಕಲ್ಲಂಗಡಿ ಸುಮಾರು 90 ಪ್ರತಿಶತದಷ್ಟು ನೀರನ್ನು ಹೊಂದಿರುತ್ತದೆ, ಕೆಲವೊಮ್ಮೆ ನೀರಿನ ಕೊರತೆಯಿಂದಲೇ ನಮ್ಮ ಮನಸ್ಥಿತಿ ಕೆಟ್ಟು ಹೋಗಿರುತ್ತದೆ. ಅಂತಹ ಸಂದರ್ಭದಲ್ಲಿ ಕಲ್ಲಂಗಡಿ ಸೇವಿಸಿದ್ರೆ ಮೂಡ್ ಸರಿಹೋಗುತ್ತದೆ. ಕಲ್ಲಂಗಡಿಯಲ್ಲಿ ಅನೇಕ ರೀತಿಯ ಎಂಟಿಒಕ್ಸಿಡೆಂಟ್‌ಗಳಿವೆ. ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.
ಕಿತ್ತಳೆ
ಕಿತ್ತಳೆ, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣು. ಇದರಲ್ಲಿ ಪೊಟ್ಯಾಶಿಯಂ ಕೂಡ ಇರುತ್ತದೆ. ಇದರಿಂದಾಗಿ ನಿಮ್ಮ ಒತ್ತಡ ಮತ್ತು ಆತಂಕವನ್ನು ಇದು ಹೋಗಲಾಡಿಸುತ್ತದೆ.
ಬೆರಿ ಹಣ್ಣು
ಬ್ಲೂಬೆರ್ರಿ ಕೂಡ ಸಿಟ್ರಸ್ ಹಣ್ಣು. ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸಲು ನೇರವಾಗಿ ಕೆಲಸ ಮಾಡುತ್ತದೆ.