
ಟೀ ಬ್ಯಾಗ್ ನಿಂದ ಅನೇಕ ಪ್ರಯೋಜನಗಳಿವೆ. ಬೆಂದ ಟೀ ಪುಡಿಯನ್ನು ಪ್ಯಾಕ್ ಮಾಡಿ ಅದನ್ನೂ ಬಳಸಬಹುದು.
ಮುಖದ ಮೇಲೆ ಕಲೆಗಳಿದ್ದರೆ ಗ್ರೀನ್ ಟೀ ಉಪಯುಕ್ತ. ಗ್ರೀನ್ ಟೀ ಬ್ಯಾಗನ್ನು ಕಲೆಯ ಮೇಲೆ ಇಟ್ಟುಕೊಳ್ಳುತ್ತ ಬಂದರೆ ಚರ್ಮದ ಮೇಲಿರುವ ಕಲೆ ಮಾಯವಾಗುತ್ತದೆ. ಗ್ರೀನ್ ಟೀ ಚರ್ಮದ ಮೇಲೆ ಕಂಡು ಬರುವ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಗುಣ ಹೊಂದಿದೆ.
ಚರ್ಮದ ಸುಕ್ಕನ್ನು ಇದು ಕಡಿಮೆ ಮಾಡುತ್ತದೆ. ಗ್ರೀನ್ ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟ್ ವಯಸ್ಸಾದ ಚಿಹ್ನೆಯನ್ನು ಹೋಗಲಾಡಿಸುವುದಲ್ಲದೇ, ಚರ್ಮದ ಅನೇಕ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
ಕೂದಲಿಗೆ ಹೊಳಪು ನೀಡಲು ಬಯಸುವವರು ಟೀ ಬ್ಯಾಗ್ ಬಳಸಬಹುದು. ಒಮ್ಮೆ ಬಳಕೆಯಾದ ಟೀ ಬ್ಯಾಗನ್ನು ನಾಲ್ಕೈದು ಕಪ್ ನೀರಿನೊಂದಿಗೆ ಮತ್ತೆ ಕುದಿಸಿ, ನೀರು ತಣ್ಣಗಾದ ನಂತರ ತಲೆಗೆ ಹಚ್ಚಿಕೊಳ್ಳಬೇಕು.