ಪ್ರಾಣಿ ಪ್ರಿಯರ ಸಂಖ್ಯೆ ಹೆಚ್ಚಿದೆ. ಜನರು ನೆಚ್ಚಿನ ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾರೆ. ಕೆಲವರ ಮನೆಯಲ್ಲಿ ನಾಯಿಯಿದ್ರೆ ಮತ್ತೆ ಕೆಲವರ ಮನೆಯಲ್ಲಿ ಬೆಕ್ಕಿರುತ್ತದೆ. ಇನ್ನು ಕೆಲವರು ಗಿಳಿ, ಮೊಲ, ಕೋಳಿ ಸೇರಿದಂತೆ ತಮಗಿಷ್ಟವಾಗುವ ಪಕ್ಷಿ, ಪ್ರಾಣಿಯನ್ನು ಸಾಕುತ್ತಾರೆ. ಮನೆಯಲ್ಲಿ ಯಾವ ಪ್ರಾಣಿ ಸಾಕಿದ್ರೆ ಶುಭ ಎಂಬುದು ನಿಮಗೆ ಗೊತ್ತಾ?
ನಾಯಿ: ಹಿಂದೂ ಧರ್ಮದಲ್ಲಿ ನಾಯಿಯನ್ನು ಭೈರವನ ಸ್ವರೂಪ ಎನ್ನಲಾಗಿದೆ. ಮನೆಯಲ್ಲಿ ನಾಯಿ ಸಾಕುವುದು ಶುಭಕರ. ನಾಯಿಗೆ ಪ್ರತಿ ದಿನ ಆಹಾರ ಹಾಕಿದ್ರೆ ಸಂಪತ್ತು, ಸುಖ ಮನೆಯಲ್ಲಿ ನೆಲೆಸಿರುತ್ತದೆ.
ಕಪ್ಪೆ: ಮನೆಯಲ್ಲಿ ಕಪ್ಪೆಯನ್ನು ಸಾಕಿದ್ರೆ ಅಥವಾ ಕಂಚಿನ ಕಪ್ಪೆಯನ್ನು ಮನೆಯಲ್ಲಿಟ್ಟುಕೊಂಡ್ರೆ ಅದು ಒಳ್ಳೆಯದು. ಕಪ್ಪೆ ಮನೆಯಲ್ಲಿದ್ದರೆ ಯಾವುದೇ ರೋಗ ಕಾಡುವುದಿಲ್ಲ.
ಗಿಳಿ: ಮನೆಯಲ್ಲಿ ಗಿಳಿಯಿದ್ರೆ ಯಾವುದೇ ಸಂಕಷ್ಟ ಮನೆಯೊಳಗೆ ಪ್ರವೇಶ ಮಾಡುವುದಿಲ್ಲ. ಗಿಳಿ ಇರುವ ಮನೆಗೆ ಕಷ್ಟಗಳು ಬರುವುದಿಲ್ಲವಂತೆ.
ಕುದುರೆ: ಕುದುರೆ ಐಶ್ವರ್ಯದ ಸಂಕೇತ. ಮನೆಯಲ್ಲಿ ಕುದುರೆ ಮೂರ್ತಿ ಅಥವಾ ಕುದುರೆ ಸಾಕುವುದು ಬಹಳ ಒಳ್ಳೆಯದು.
ಆಮೆ: ಮನೆಯಲ್ಲಿ ಆಮೆಗಳ ಮೂರ್ತಿಯನ್ನು ಇಡಲಾಗುತ್ತದೆ. ಮನೆಯಲ್ಲಿ ನಿಜವಾದ ಆಮೆ ಸಾಕಿದ್ರೆ ಹೆಚ್ಚು ಶುಭಫಲ ಪ್ರಾಪ್ತಿಯಾಗುತ್ತದೆ.
ಮೀನು: ಮನೆಯಲ್ಲಿ ಸದಾ ಸುಖ-ಶಾಂತಿ ನೆಲೆಸಿರಬೇಕೆಂದ್ರೆ ಬಂಗಾರ ಬಣ್ಣದ ಮೀನನ್ನು ಸಾಕಬೇಕು.