ನೀವು ಉಪಯೋಗಿಸುವ ಬಾತ್ ಟವಲ್ ಹೊಸದರಂತೆ ಕಾಣಬೇಕೆ…?
ಬೇಕಿಂಗ್ ಸೋಡಾ, ವಿನೇಗರ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ. ಇದು ಅಡುಗೆಗೆ ಮಾತ್ರವಲ್ಲ ಕ್ಲೀನಿಂಗ್ ಗೂ ಇವರೆಡನ್ನೂ ಬಳಸುತ್ತಾರೆ. ಬೇಕಿಂಗ್ ಸೋಡಾ, ವಿನೇಗರ್ ಬಳಸಿ ಹೇಗೆಲ್ಲಾ ಕ್ಲೀನ್ ಮಾಡಬಹುದು ಎಂಬುದನ್ನು ನೋಡೋಣ.
ಏನಾದರೂ ಬೇಕ್ ಮಾಡುವುದಕ್ಕೆ ಹೋದಾಗ ಅಥವಾ ಗ್ಯಾಸ್ ಮೇಲೆ ಇಟ್ಟ ಪ್ಯಾನ್ ಉರಿ ಹೆಚ್ಚಾಗಿ ಸೀದು ಹೋಗಿರುತ್ತದೆ. ಎಷ್ಟೇ ತಿಕ್ಕಿ ತೊಳೆದರೂ ಅದು ಹೋಗುವುದಿಲ್ಲ. ಹೀಗಿದ್ದಾಗ ಆ ಪ್ಯಾನ್ ಗೆ ಸ್ವಲ್ಪ ನೀರು ಹಾಕಿ ಅದಕ್ಕೆ 1 ಕಪ್ ವಿನೇಗರ್ ಹಾಕಿ ಸಣ್ಣ ಉರಿಯಲ್ಲಿ ಗ್ಯಾಸ್ ಮೇಲೆ ಇಡಿ. ನಂತರ ಇದು ಬಿಸಿಯಾದಾಗ ಗ್ಯಾಸ್ ಆಫ್ ಮಾಡಿ 2 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ಹಾಕಿ. ಗುಳ್ಳೆಗಳ ರೀತಿ ಬರುತ್ತದೆ. ಈ ಗುಳ್ಳೆಗಳು ಹೋದ ನಂತರ ಒಂದು ಬ್ರಷ್ ನ ಸಹಾಯದಿಂದ ಇದನ್ನು ಚೆನ್ನಾಗಿ ಉಜ್ಜಿ ತೆಗೆಯಿರಿ.
ಸ್ನಾನ ಮಾಡಿದಾಗ ಮೈ ಒರೆಸಿಕೊಳ್ಳಲು ಬಳಸುವ ಟವೆಲ್ ದಿನ ಕಳೆದಂತೆ ಒಂದು ರೀತಿ ವಾಸನೆ ಬರಲು ಶುರುವಾಗುತ್ತದೆ. ಒಂದು ಬಕೆಟ್ ಗೆ ½ ಕಪ್ ಬೇಕಿಂಗ್ ಸೋಡಾ ಹಾಗೂ ನೀರು ಹಾಕಿ ಈ ಟವೆಲ್ ಗಳನ್ನು ನೆನೆಸಿಡಿ. 1/2 ಗಂಟೆ ಬಿಟ್ಟು ನೆನೆಸಿದ ಟವಲ್ ಅನ್ನು ವಾಶ್ ಮಾಡಿ. ಬಟ್ಟೆ ತೊಳೆಯುವ ನೀರಿಗೆ ¼ ಕಪ್ ನಷ್ಟು ವಿನೇಗರ್ ಹಾಕಿ ಈ ನೀರಿನಿಂದ ಆ ಟವೆಲ್ ಗಳನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಬಟ್ಟೆ ಕೊಳೆಯೆಲ್ಲಾ ಹೋಗಿ ಹೊಸದರ ರೀತಿ ಕಾಣುತ್ತದೆ.