ಹಿಂದೂ ಧರ್ಮದ ಪ್ರಕಾರ ಮನೆಯಲ್ಲಿ ಶಂಖ ಇರಲೇಬೇಕು. ಇದರಿಂದ ಸುಖ, ಸಮೃದ್ಧಿ ಸಿಗುತ್ತೆ ಎಂಬ ನಂಬಿಕೆ ಇದೆ. ಆದರೆ ಶಂಖ ಇರುವ ಮನೆಯವರು ಈ 8 ಅಂಶಗಳನ್ನು ಗಮನದಲ್ಲಿಡಲೇಬೇಕು.
ಶಂಖವನ್ನು ಯಾವಾಗಲೂ ನೀರಿನಲ್ಲಿ ಇಡಬಾರದು.
ಹಾಗೆಯೇ ಭೂಮಿಯ ಮೇಲೆ ಶಂಖವನ್ನು ಇಡಬಾರದು. ಸ್ವಚ್ಛವಾದ ಬಟ್ಟೆ ಮೇಲೆ ಶಂಖವನ್ನು ಇಡಬೇಕು.
ಶಂಖದೊಳಗೆ ನೀರನ್ನು ಹಾಕಿ ಇಡಬಾರದು. ಪೂಜೆ ಮಾಡುವ ವೇಳೆ ಶಂಖಕ್ಕೆ ನೀರು ಹಾಕಿ ಪೂಜೆ ಮಾಡುತ್ತಾರೆ. ನಂತರ ಆ ನೀರನ್ನು ಕುಡಿಯುವುದರಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಜೀವನದಲ್ಲಿ ಅದೃಷ್ಟ ಒಲಿದು ಬರುತ್ತದೆ.
ಪೂಜೆ ಮಾಡುವ ವೇಳೆ ಶಂಖದ ತೆರೆದ ಭಾಗ ಮೇಲೆ ಬರುವಂತೆ ಇಡಬೇಕು.
ವಿಷ್ಣು, ಲಕ್ಷ್ಮಿ, ಬಾಲ ಗಣಪತಿಯ ಬಲಭಾಗಕ್ಕೆ ಶಂಖವನ್ನು ಇಡಬೇಕು.
ಶಂಖವನ್ನು ಲಕ್ಷ್ಮಿಗೆ ಹೋಲಿಸುತ್ತಾರೆ. ಹಾಗಾಗಿ ಉಳಿದ ದೇವರಿಗೆ ಮಾಡುವಂತೆ ಶಂಖಕ್ಕೂ ಪೂಜೆ ಮಾಡಬೇಕು.
108 ಅಕ್ಕಿಯ ಜೊತೆ ಕೆಂಪು ಬಟ್ಟೆಯಲ್ಲಿ ಶಂಖವನ್ನು ಕಪಾಟಿನಲ್ಲಿಡುವುದರಿಂದ ಧನ ಪ್ರಾಪ್ತಿಯಾಗುತ್ತದೆ.
ಶಂಖದ ಧ್ವನಿಯಿಂದ ಮನೆಯಲ್ಲಿ ಧನಾತ್ಮಕ ಗುಣ ವೃದ್ಧಿಯಾಗುತ್ತದೆ. ಹಾಗಾಗಿ ಪ್ರತಿದಿನ ಮನೆಯಲ್ಲಿ ಶಂಖ ಊದಬೇಕು.