ಮಗುವಿನ ಬಗ್ಗೆ ಪೋಷಕರಿಗೆ ಎಲ್ಲಿಲ್ಲದ ಅಕ್ಕರೆ, ಕಾಳಜಿ, ಕುತೂಹಲ. ತಮ್ಮ ಮಗು ನಡೆಯುವುದು, ತೊದಲು ನುಡಿಗಳನ್ನಾಡುವುದನ್ನಂತೂ ಮರೆಯುವುದು ಸಾಧ್ಯವೇ ಇಲ್ಲ. ಮಗು ಬೇಗನೆ ನಡೆಯುವುದು ಆರಂಭಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಲು ಈ ಸ್ಟೋರಿ ನೋಡಿ.
ಯಾವ ಮಗು ಬಹುಬೇಗನೆ ನಡೆಯಲು ಆರಂಭಿಸುತ್ತದೆಯೋ ಅಂತಹ ಮಗು ಸದೃಢವಾಗಿರುತ್ತದೆ, ಕೆಲವು ಮಕ್ಕಳು ಅಂಬೆಗಾಲು ಇಡುವುದು, ನಡೆದಾಡುವುದು ನಿಧಾನ. ಮತ್ತೆ ಕೆಲವರು, ಬಹುಬೇಗನೆ ನಡೆದಾಡುತ್ತಾರೆ. ಬೇಗ ಓಡಾಡುವ ಮಕ್ಕಳು ಸದೃಢವಾಗುತ್ತಾರೆ ಎಂದು ಸಂಶೋಧನೆಯೊಂದರಲ್ಲಿ ತಿಳಿದುಬಂದಿದೆ.
ಬೇಗನೆ ನಡೆಯುವುದನ್ನು ಆರಂಭಿಸುವ ಮಕ್ಕಳು, ಜಂಪಿಂಗ್, ರನ್ನಿಂಗ್ ನಲ್ಲಿ ಮುಂದಿರುತ್ತಾರೆ. ಬೆಳೆದು ದೊಡ್ಡವರಾದಂತೆ ಅವರು ಸದೃಢರಾಗುತ್ತಾರೆ. ನಿಧಾನವಾಗಿ ನಡೆದಾಡುವ ಮಕ್ಕಳಿಗೆ ಹೋಲಿಸಿದಾಗ ಇವರು ಹೆಚ್ಚು ಸಾಮರ್ಥ್ಯ ಹೊಂದಿರುತ್ತಾರೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.