ಖಿನ್ನತೆ ವಯಸ್ಕರನ್ನು ಮಾತ್ರವಲ್ಲ ಮಕ್ಕಳನ್ನೂ ಕಾಡುತ್ತದೆ. ಮಗು ಕೋಪಗೊಳ್ಳುವುದು ಸಹಜ. ಆದರೆ ಇದು ಅತಿರೇಕಕ್ಕೆ ಹೋದಾಗ ಅಥವಾ ಅತಿಯಾಗಿ ಮೌನಿಯಾಗಿದ್ದರೆ ನಿರ್ಲಕ್ಷಿಸಬಾರದು. ಕೆಲವೊಮ್ಮೆ ಮಕ್ಕಳ ವರ್ತನೆ ಖಿನ್ನತೆಯನ್ನು ಸೂಚಿಸುತ್ತದೆ.
ಮಕ್ಕಳಲ್ಲಿ ಖಿನ್ನತೆ ಏಕೆ ಉಂಟಾಗುತ್ತದೆ…?
ಮಕ್ಕಳ ಖಿನ್ನತೆಗೆ ಹಲವು ಕಾರಣಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅನಾರೋಗ್ಯ, ಕುಟುಂಬದ ಸಮಸ್ಯೆಗಳು, ಸುತ್ತಮುತ್ತಲಿನ ಪರಿಸರ, ಆನುವಂಶಿಕ ಕಾರಣಗಳು ಖಿನ್ನತೆಗೆ ನೂಕುತ್ತದೆ. ಖಿನ್ನತೆಯಿಂದ ಬಳಲುವ ಮಕ್ಕಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಬಯಸುತ್ತಾರೆ.
ಮಕ್ಕಳಲ್ಲಿ ಖಿನ್ನತೆಯ 10 ಲಕ್ಷಣಗಳು :
- ಸದಾ ಕಿರಿಕಿರಿ. ಅತಿಯಾದ ಕೋಪ. ಸದಾ ದುಃಖ, ಅಳು.
- ನಿದ್ರೆಯಲ್ಲಿ ಹಠಾತ್ ಬದಲಾವಣೆ. ಕಡಿಮೆ ನಿದ್ರೆ ಅಥವಾ ಅತಿಯಾದ ನಿದ್ರೆ.
- ಹತಾಶಾ ಮನೋಭಾವ, ಭರವಸೆಯಿಲ್ಲದ ಜೀವನ.
- ಬಳಲಿಕೆ ಮತ್ತು ನಿಶ್ಯಕ್ತಿ.
- ಏಕಾಗ್ರತೆ ಕೊರತೆ. ಸಣ್ಣಪುಟ್ಟ ತಪ್ಪುಗಳಿಗೆ ಅತಿಯಾದ ಚಿಂತೆ.
- ಹೊಟ್ಟೆ ಅಥವಾ ತಲೆನೋವು.
- ಸಾಮಾಜಿಕ ಚಟುವಟಿಕೆಗಳಿಂದ ದೂರವನ್ನು ಕಾಪಾಡಿಕೊಳ್ಳುವುದು. ಕಡಿಮೆ ಸ್ನೇಹಿತರು ಮತ್ತು ಸಂಬಂಧಿಕರು.
- ಆತ್ಮಹತ್ಯೆಯ ಬಗ್ಗೆ ಸದಾ ಆಲೋಚನೆ.