ಕೆಲವರು ಬೆಳ್ಳಿಯ ಕೈಬಳೆ, ಗೆಜ್ಜೆ, ಉಂಗುರ ಕಿವಿಯೋಲೆ ಬಳಸುತ್ತಾರೆ. ಇದು ಬೆವರಿನ ಕಾರಣದಿಂದ ದಿನ ಕಳೆದಂತೆ ಕಪ್ಪಾಗುತ್ತದೆ. ಮನೆಯಲ್ಲಿಯೇ ಇದನ್ನು ಸುಲಭಾಗಿ ಕ್ಲೀನ್ ಮಾಡಿ ಹೊಸದರಂತೆ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಅಲ್ಯುಮಿನಿಯಂ ಫಾಯಿಲ್ ಶೀಟ್-1, ಬೇಕಿಂಗ್ ಸೋಡಾ-1 ಟೇಬಲ್ ಸ್ಪೂನ್, ಉಪ್ಪು-1-ಟೇಬಲ್ ಸ್ಪೂನ್, ಡಿಶ್ ಲಿಕ್ವಿಡ್-1 ಟೇಬಲ್ ಸ್ಪೂನ್, ಬಿಸಿನೀರು-1 ಕಪ್, 1- ಬ್ರೆಷ್.
ಮೊದಲಿಗೆ ಒಂದು ಬೌಲ್ ಗೆ ಅಲ್ಯುಮಿನಿಯಂ ಫಾಯಿಲ್ ಶೀಟ್ ಅನ್ನು ಹಾಕಿ ನಂತರ ಅದಕ್ಕೆ ಬಿಸಿ ನೀರು ಸೇರಿಸಿ ಉಪ್ಪು ಹಾಗೂ ಬೇಕಿಂಗ್ ಸೋಡಾ, ಡಿಶ್ ಲಿಕ್ವಿಡ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ನಿಮ್ಮ ಬೆಳ್ಳಿಯ ಆಭರಣಗಳನ್ನು ಹಾಕಿ 10 ನಿಮಿಷಗಳ ಕಾಲ ನೆನೆಸಿಡಿ.
ನಂತರ ಒಂದು ಟೂಥ್ ಬ್ರಶ್ ನ ಸಹಾಯದಿಂದ ಆಭರಣಗಳನ್ನು ನಿಧಾನಕ್ಕೆ ತಿಕ್ಕಿ. ಶುದ್ಧವಾದ ನೀರಿನಿಂದ ತೊಳೆಯಿರಿ. ನಂತರ ಒಂದು ಕಾಟನ್ ಬಟ್ಟೆಯ ಸಹಾಯದಿಂದ ಇದರಲ್ಲಿರುವ ನೀರಿನ ಪಸೆಯನ್ನು ಒರೆಸಿ ತೆಗೆಯಿರಿ. ಇದರಿಂದ ನಿಮ್ಮ ಆಭರಣಗಳು ಹೊಸದರಂತೆ ಹೊಳೆಯುತ್ತದೆ.