ಶಾಲೆಗೆ ಹೋಗುವ ಮಕ್ಕಳು, ಅಥವಾ ಆಫೀಸ್ ಗೆ ಹೋಗುವವರ ಶರ್ಟ್ ನಲ್ಲಿ ಯಾವುದೋ ಕಾರಣದಿಂದ ಪೆನ್ನಿನ ಇಂಕ್ ನಿಂದ ಕಲೆಯಾಗಿರುತ್ತದೆ. ಅದು ಬಿಳಿ ಬಣ್ಣದ ಶರ್ಟ್ ಇದ್ದರಂತೂ ಕೇಳುವುದೇ ಬೇಡ. ಮಕ್ಕಳ ಯೂನಿಫಾರ್ಮ್ ನಲ್ಲಿ ಹೆಚ್ಚಾಗಿ ಈ ಕಲೆಗಳು ಕಂಡುಬರುತ್ತದೆ. ಶಾಲೆಯಲ್ಲಿ ಬರೆಯುವಾಗ ಪೆನ್ನು ತಾಕಿಯೋ ಅಥವಾ ಅವರ ಗೆಳೆಯರ್ಯಾರೋ ಗೀಚಿಯೋ ಶರ್ಟ್ ಮೇಲೆ ಇಂಕಿನ ಕಲೆಯಾಗಿರುತ್ತದೆ. ಇದನ್ನು ಸುಲಭದಲ್ಲಿ ತೆಗೆಯಲು ಈ ವಿಧಾನ ಅನುಸರಿಸಿ.
*ಶರ್ಟ್ ನಲ್ಲಿ ಇಂಕಿನ ಕಲೆ ಇರುವ ಕಡೆ ಅನ್ನವನ್ನು ಮೆತ್ತಗಾಗಿಸಿಕೊಂಡು ಚೆನ್ನಾಗಿ ತಿಕ್ಕಿ. ನಂತರ ತೊಳೆದರೆ ಕಲೆ ಹೋಗುತ್ತದೆ.
*ಇನ್ನು ಪೆನ್ನಿನ ಇಂಕ್ ಇರುವ ಭಾಗವನ್ನು ಸ್ವಲ್ಪ ಹಾಲಿನಲ್ಲಿ ಅದ್ದಿ ಇಡಿ. 4 ಗಂಟೆಗಳ ಕಾಲ ಬಿಟ್ಟು ತೊಳೆದರೆ ಕಲೆ ಹೋಗುತ್ತದೆ.
*ಇನ್ನು ಉಪ್ಪು ಕೂಡ ಈ ಕಲೆ ನಿವಾರಣೆಯಲ್ಲಿ ಹೆಚ್ಚು ಸಹಕಾರಿಯಾಗಿದೆ. ಕಲೆ ಇರುವ ಜಾಗಕ್ಕೆ ಉಪ್ಪು ಹಾಕಿ ಒಂದು ಒದ್ದೆ ಟವೆಲ್ ನ ಸಹಾಯದಿಂದ ಆ ಜಾಗವನ್ನು ತಿಕ್ಕಿದರೆ ಕಲೆ ಹೋಗುತ್ತದೆ.
ಇನ್ನು ಬೆಡ್ ಮೇಲೆ ಮಕ್ಕಳು ಪೆನ್ನಿನ್ ಇಂಕ್ ನಿಂದ ಕಲೆ ಮಾಡಿದ್ದರೆ ಅದಕ್ಕೆ ಹೇರ್ ಸ್ಪ್ರೇಯನ್ನು ಸ್ಪ್ರೇ ಮಾಡಿ. ನಂತರ ತಿಕ್ಕಿ ಕಲೆ ಹೋಗುತ್ತದೆ.
ನೈಲ್ ಪಾಲಿಶ್ ರಿಮೂವರ್ ಅನ್ನು ಕಲೆ ಇರುವ ಜಾಗಕ್ಕೆ ಹಚ್ಚಿ ತುಸು ತಿಕ್ಕಿ ನಂತರ ತೊಳೆದರೆ ಕಲೆ ಮಾಯವಾಗುತ್ತದೆ.