ಬಿಸ್ಕಿಟ್ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಅನೇಕ ವರ್ಷಗಳಿಂದ ಒಂದೇ ಕಂಪನಿ ಬಿಸ್ಕಿಟ್ ಸೇವಿಸುತ್ತ ಬಂದಿರುವವರಿದ್ದಾರೆ. ಬ್ರಿಟಾನಿಯಾ ಬೌರ್ಬನ್ ಬಿಸ್ಕತ್ತು ಅನೇಕರಿಗೆ ಇಷ್ಟ. ಈಗ ಈ ಬಿಸ್ಕಿಟ್, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷ್ಯವಾಗಿದೆ. ಬಿಸ್ಕಿಟ್ ಗಾತ್ರದ ಬಗ್ಗೆ ಚರ್ಚೆಯಾಗ್ತಿದೆ.
ಪತ್ರಕರ್ತ ವೀರ್ ಸಂಘವಿ, ಸಾಮಾಜಿಕ ಜಾಲತಾಣದಲ್ಲಿ ಬ್ರಿಟಾನಿಯಾ ಬೌರ್ಬನ್ ಬಗ್ಗೆ ಟ್ವಿಟ್ ಮಾಡಿದ್ದಾರೆ. ಇದು ನನ್ನ ಕಲ್ಪನೆಯಾಗಿರಬಹುದು. ಆದ್ರೆ ಬೌರ್ಬನ್ ಬಿಸ್ಕಿಟ್ ಮೊದಲು ದೊಡ್ಡದಾಗಿತ್ತು ಅಲ್ವಾ? ಎಂದು ಬರೆದಿದ್ದಾರೆ.
ವೀರ್ ಸಂಘವಿ ಟ್ವೀಟ್ ಗೆ ಕಂಪನಿ ಉತ್ತರ ನೀಡಿದೆ. ಸದ್ಯ, ಬಿಸ್ಕಿಟ್ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಿಮ್ಮ ನಿರೀಕ್ಷೆ ಹೆಚ್ಚಾಗಿದೆಯಷ್ಟೆ ಎಂದು ಕಂಪನಿ ಬರೆದಿದೆ.
ಇದಕ್ಕೆ ವೀರ್ ಸಂಘವಿ ಮತ್ತೆ ಪ್ರಶ್ನೆ ಕೇಳಿದ್ದಾರೆ. ಎಷ್ಟು ವರ್ಷದಿಂದ ಬದಲಾಗಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಕಂಪನಿ, ಕಳೆದ 6 ವರ್ಷಗಳಿಂದ ಬಿಸ್ಕಿಟ್ ಗಾತ್ರ ಒಂದೇ ರೀತಿಯಿದೆ ಎಂದಿದೆ. ವೀರ್ ಸಂಘವಿ ಟ್ವೀಟ್ ಗೆ ಸಂಸದೆ ಮಹುವಾ ಮೊಯಿತ್ರಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಪ್ರಶ್ನೆಗೆ ನಮ್ಮ ಸಹಮತವಿದೆ. ಆದ್ರೆ ನನ್ನ ನೆಚ್ಚಿನ ಆರೆಂಜ್ ಫ್ಲೇವರ್ ಸಿಕ್ತಿಲ್ಲವೆಂದು ಬರೆದಿದ್ದಾರೆ. ವೀರ ಸಂಘವಿ ಟ್ವೀಟ್ ಗೆ ಇನ್ನೂ ಅನೇಕರು ಕಮೆಂಟ್ ಮಾಡಿದ್ದಾರೆ.