ಮನೆಯಲ್ಲೊಂದು ನಾಯಿ ಇರಲಿ ಎಂಬುದು ಬಹುತೇಕರ ಬಯಕೆ. ಆದರೆ ಅದರ ಆಹಾರ ಹೇಗಿರಬೇಕು ಎಂಬುದನ್ನು ನಿಖರವಾಗಿ ತಿಳಿದುಕೊಂಡಿರುವವರು ಬಹಳ ಕಡಿಮೆ ಮಂದಿ. ಹಾಗಿದ್ದರೆ ನಾವೀಗ ನಾಯಿಯ ಆಹಾರ ಹೇಗಿರಬೇಕು ಎಂಬುದನ್ನು ತಿಳಿಯೋಣ.
ನಾವು ತಿನ್ನುವುದೆಲ್ಲವನ್ನೂ ಅಥವಾ ತಿಂದು ಮಿಕ್ಕಿದ, ಹಾಳಾದ ತಂಗಳನ್ನವನ್ನು ನಾಯಿಗೆ ಹಾಕಬಾರದು. ಚಾಕಲೇಟ್, ಚಹಾ, ಕಾಫಿಯನ್ನು ನಾಯಿಗೆ ಹಾಕಲೇಬಾರದು.
ಬೆಕ್ಕಿನ ಬಿಸ್ಕೆಟ್ ಅಥವಾ ಫುಡ್ ಗಳನ್ನು ನಾಯಿಗೆ ಹಾಕಬಾರದು. ಏಕೆಂದರೆ ಅದರಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆ.
ಆಲ್ಕೋಹಾಲ್ ಸೇವನೆಯಿಂದ ನಾಯಿಗೆ ಮತ್ತೇರಿ ಸಾವು ಸಂಭವಿಸಬಹುದು. ಕೊಳೆತ ಆಹಾರದಲ್ಲಿರುವ ಟಾಕ್ಸಿನ್ ಗಳು ನಾಯಿಗೆ ಇತರ ರೋಗಗಳನ್ನು ತಂದೊಡ್ಡಬಹುದು.
ಹಾಗಾಗಿ ನಿಮ್ಮ ನಾಯಿ ಯಾವ ಪ್ರಕಾರದ್ದು ಎಂಬುದನ್ನು ಮೊದಲೇ ತಿಳಿದುಕೊಂಡು ಅದಕ್ಕೆ ಯಾವ ರೀತಿಯ ಆಹಾರ ನೀಡಬೇಕು ಎಂಬುದನ್ನು ಪಶುವೈದ್ಯರ ಬಳಿ ಕೇಳಿ ತಿಳಿದುಕೊಳ್ಳಿ.