ಮೆಗ್ನೀಷಿಯಂ ಎಲುಬು ಮತ್ತು ಹಲ್ಲುಗಳು ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಟೀನ್ ಅಂಶ ತುಂಬಾ ಚೆನ್ನಾಗಿ ಇರಬೇಕು ಎಂದರೆ ಮೆಗ್ನೀಷಿಯಂ ಅಗತ್ಯತೆ ತುಂಬಾ ಇದೆ. ಪ್ರತಿದಿನ ನಮಗೆ 350 ಎಮ್ ಜಿಯಿಂದ 450 ಎಮ್ ಜಿ ಯಷ್ಟು ಮೆಗ್ನೀಷಿಯಂ ದೇಹಕ್ಕೆ ಬೇಕಾಗುತ್ತದೆ.
ಮೆಗ್ನೀಷಿಯಂ ಕೊರತೆಯಾದರೆ ಹಲ್ಲುಗಳು ಹಾಳಾಗುತ್ತದೆ. ಮೂಳೆಗಳು ಬಲಹೀನವಾಗುತ್ತವೆ. ಹೃದಯದ ಬಡಿತ ಹೆಚ್ಚಾಗುತ್ತದೆ. ನಿದ್ರಾಹೀನತೆ ಸಮಸ್ಯೆ, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ, ಮಲಬದ್ಧತೆ ಮೊದಲಾದ ಅನೇಕ ಸಮಸ್ಯೆಗಳು ಮೆಗ್ನೀಷಿಯಂ ಕೊರತೆಯಿಂದ ಬರುತ್ತದೆ.
ಸೊಪ್ಪು, ತರಕಾರಿಗಳು, ಪಾಲಕ್ ಸೊಪ್ಪು, ದ್ವಿದಳ ಧಾನ್ಯಗಳು, ಮೊಸರು, ನಟ್ಸ್, ಬಾಳೆಹಣ್ಣು, ಕುಂಬಳಕಾಯಿ, ಸೋಯಾ ಬೀನ್ಸ್ ಹಾಗೂ ಬ್ಯ್ಲಾಕ್ ಬೀನ್ಸ್, ಬಾದಾಮಿ, ಗೋಡಂಬಿ ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ಮೆಗ್ನೀಷಿಯಂ ದೊರೆಯುತ್ತದೆ.