ದೇಹಕ್ಕೆ ಫ್ರೋಟಿನ್ ನ ಅಗತ್ಯ ತುಂಬಾ ಇದೆ. ಪ್ರೋಟೀನ್ ಭರಿತವಾದ ಆಹಾರ ಸೇವಿಸುವುದರಿಂದ ದೇಹದಲ್ಲಿನ ಕೊಬ್ಬು ಕಡಿಮೆಯಾಗುತ್ತದೆ.
ಪ್ರೋಟಿನ್ ಯುಕ್ತವಾದ ಹಣ್ಣುಗಳನ್ನು ತಿಂದರೆ ದೇಹದಲ್ಲಿನ ಅನಗತ್ಯ ಕೊಬ್ಬು ಕರಗಿ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಇದು ಒದಗಿಸುತ್ತದೆ.
ಇದು ಜೀರ್ಣಾಂಗ ಕ್ರೀಯೆಯನ್ನು ಸರಾಗವಾಗಿಸುತ್ತದೆ.ಪ್ರೋಟಿನ್ ಭರಿತವಾದ ಆಹಾರಗಳು ಯಾವುದು ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.
ಒಣದ್ರಾಕ್ಷಿ: ಇದರಲ್ಲಿ ಪ್ರೋಟೀನ್ ಹೇರಳವಾಗಿದೆ. 100 ಗ್ರಾಂ ಒಣದ್ರಾಕ್ಷಿಯಲ್ಲಿ 3 ಗ್ರಾಂ ನಷ್ಟು ಪ್ರೋಟೀನ್ ಇದೆಯಂತೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪ್ರೋಟೀನ್ ಸಿಗುತ್ತದೆ.
ಸೀಬೆಹಣ್ಣು: ವಿಟಮಿನ್ ಸಿ ಹೇರಳವಾಗಿರುವ ಈ ಹಣ್ಣಿನಲ್ಲಿ ನಾರಿನಾಂಶವು ಹೆಚ್ಚಿದೆ. ಹಾಗೇ ಇದು ಪ್ರೋಟಿನ್ ಭರಿತವಾದ ಹಣ್ಣು. ಸಲಾಡ್ ರೀತಿ ಸೇವಿಸಬಹುದು ಹಾಗೇ ಕೂಡ ತಿನ್ನಬಹುದು. ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ.
ಖರ್ಜೂರ: ಖರ್ಜೂರ ಕೂಡ ದಿನ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಗಳು ಸಿಗುತ್ತದೆ. ಜತೆಗೆ ಸಿಹಿ ತಿನ್ನುವ ಆಸೆಯನ್ನು ಪೂರೈಸುತ್ತದೆ. ಇದನ್ನು ಟೀ ಕಾಫಿ ಜತೆ ಕೂಡ ಸೇವಿಸಬಹುದು.
ಮೊಳಕೆಕಾಳು: ಇದರಲ್ಲಿ ಪ್ರೋಟೀನ್ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಪೋಷಕಾಂಶಗಳು ಸಿಗುತ್ತದೆ. ತೂಕ ಇಳಿಕೆಗೆ ಕೂಡ ಸಹಾಯ ಮಾಡುತ್ತದೆ.