ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್, ವಿಶೇಷವಾಗಿ ಇನ್ಸ್ಟಾಗ್ರಾಂ, ಚಿಕ್ಕ ವಿಡಿಯೋಗಳಿಂದ ತುಂಬಿರುತ್ತದೆ. ಕೆಲವು ವಿಡಿಯೋಗಳನ್ನು ನೀವು ಸ್ಕ್ರಾಲ್ ಮಾಡಬಹುದು. ಆದರೆ, ಇನ್ನು ಕೆಲವು ವಿಡಿಯೋಗಳು ನಿಮ್ಮನ್ನು ನಗುವಂತೆ ಮಾಡುತ್ತದೆ. ಅಂಥಾ ವಿಡಿಯೋಗಳು ನಿಮ್ಮನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತವೆ. ಇದೀಗ ಮುದ್ದಾದ ವಿಡಿಯೋವೊಂದು ಔಟ್ ಆಗಿದೆ.
ಗುಡ್ ನ್ಯೂಸ್ ವರದಿಗಾರನ ಪುಟದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಸುಮಾರು 70 ಸಾವಿರ ವೀಕ್ಷಣೆಗಳನ್ನು ಪಡೆದಿದೆ. ಪುಟ್ಟ ಬಾಲಕನೊಬ್ಬ ತನ್ನ ಸಹೋದರ ಶಾಲೆಯಿಂದ ಹಿಂತಿರುಗುವ ಸಮಯಲ್ಲಿ ಬೀದಿಯಲ್ಲಿ ಕಾಯುತ್ತಿರುವ ಅದ್ಭುತ ದೃಶ್ಯ ಇದಾಗಿದೆ. ತನ್ನ ಸಹೋದರನ ಶಾಲಾ ಬಸ್ ಬರುವುದನ್ನು ನೋಡುತ್ತಿದ್ದಂತೆ, ಅವನು ಉತ್ಸಾಹದಿಂದ ಜಿಗಿಯುತ್ತಾನೆ. ಬಾಲಕ ಶಾಲಾ ಬಸ್‌ನಲ್ಲಿ ತನ್ನ ಸಹೋದರನನ್ನು ನೋಡಿದಾಗ, ಅವನು ಸಂತೋಷ ಮತ್ತು ಪ್ರೀತಿಯನ್ನು ಸುರಿಸುತ್ತಾನೆ.
ಸಹೋದರ ಬಸ್‌ನಿಂದ ಇಳಿಯುತ್ತಿದ್ದಂತೆ, ಅವನು ತನ್ನ ತಮ್ಮನ ಬಳಿಗೆ ಓಡಿ ಹೋಗಿ ಅವನಿಗೆ ಅಪ್ಪುಗೆಯನ್ನು ನೀಡುತ್ತಾನೆ. ಇಬ್ಬರು ಕೂಡ ಆಲಂಗಿಸಿ ಸಂತಸದಿಂದ ನಗೆ ಬೀರಿದ್ದಾರೆ. ಬಸ್ಸಿನಲ್ಲಿದ್ದ ಮಕ್ಕಳು ಮತ್ತು ಶಿಕ್ಷಕರು ಸಹ ಹೃದಯಸ್ಪರ್ಶಿ ವಿನಿಮಯವನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಹೋದರರ ಪ್ರೀತಿ, ವಾತ್ಸಲ್ಯ ಕಂಡು ನೆಟ್ಟಿಗರ ಕಣ್ಣಂಚು ಒದ್ದೆಯಾಗಿದೆ.