ಇನ್‌ಸ್ಟಾಗ್ರಾಮ್‌ನಲ್ಲಿ ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಮುದ್ದಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ನಿಮ್ಮ ದಿನವನ್ನು ಸುಂದರಗೊಳಿಸಬಹುದು.
ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿಯು ತನ್ನ ವಾಕಿಂಗ್ ಸ್ಟಿಕ್ ಅನ್ನು ಹಿಡಿದುಕೊಂಡು ಹಾಪ್‌ಸ್ಕಾಚ್ ಆಡಿದ್ದಾರೆ. ಈ ವಿಡಿಯೋ ಸುಮಾರು 20 ಸಾವಿರ ವೀಕ್ಷಣೆಗಳನ್ನು ಗಳಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ವೃದ್ಧರೊಬ್ಬರು ಹಾಪ್‌ಸ್ಕಾಚ್ ಆಡುತ್ತಿರುವುದನ್ನು ಕಾಣಬಹುದು. ಅವರು ಒಂದು ಕೈಯಲ್ಲಿ ತನ್ನ ವಾಕಿಂಗ್ ಸ್ಟಿಕ್ ಅನ್ನು ಹಿಡಿದಿದ್ದರೆ, ಇನ್ನೊಬ್ಬರ ಬೆಂಬಲದೊಂದಿಗೆ ಬಾಕ್ಸ್ ಗಳನ್ನು ಜಿಗಿದಿದ್ದಾರೆ. ತಮ್ಮ ಆಟವನ್ನು ಪೂರ್ಣಗೊಳಿಸಿದಾಗ ಮಂದಹಾಸ ಬೀರಿದ್ದಾರೆ. ನೆರೆದಿದ್ದ ಜನರು ಕೂಡ ಅವರನ್ನು ಚಪ್ಪಾಳೆ ತಟ್ಟಿ, ಹರ್ಷೋದ್ಗಾರ ಮಾಡಿದ್ದಾರೆ.
ಈ ವಿಡಿಯೋ ಸಹಜವಾಗಿ ವೈರಲ್ ಆಗಿದ್ದು, ನೆಟ್ಟಿಗರು ಸಂತಸಪಟ್ಟಿದ್ದಾರೆ. ಅದರಲ್ಲೂ ವೃದ್ಧ ವ್ಯಕ್ತಿಯ ಆ ನಿಷ್ಕಲ್ಮಶ ನಗು ನೆಟ್ಟಿಗರ ಹೃದಯ ಗೆದ್ದಿದೆ.