ನಿಂಬೆ ಹಣ್ಣಿನಲ್ಲಿರುವ ನ್ಯೂಟ್ರಿಶಿಯನ್ ಚಯಾಪಚಯ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಚಯಾಪಚಯ ಸರಿಯಾಗಿ ಆದ್ರೆ ಕೊಬ್ಬು ಸುಲಭವಾಗಿ ಕರಗುತ್ತದೆ. ತೂಕ ಬೇಗ ಇಳಿಯುತ್ತದೆ. ತೂಕ ಕಡಿಮೆ ಮಾಡಲು ಪ್ರತಿದಿನ ಅರ್ಧ ನಿಂಬು ಇದ್ರೆ ಸಾಕು.
ಜಮ್ಮುವಿನ ಆಯುರ್ವೇದ ಸಂಶೋಧನಾ ಸಂಸ್ಥೆ ಪ್ರೊಫೆಸರ್, ನಿಂಬೆ ರಸದ ಜೊತೆ ಅಡುಗೆ ಸೋಡಾ ಬೆರೆಸಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ತಮ್ಮ ವಾದ ಮಂಡಿಸಿದ್ದಾರೆ.
ಅವರ ಪ್ರಕಾರ, ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಎರಡು ಭಾಗ ಮಾಡಿ. ಒಂದು ಲೀಟರ್ ನೀರಿಗೆ ಅರ್ಧ ಕತ್ತರಿಸಿದ ನಿಂಬೆ ರಸವನ್ನು ಹಿಂಡಿ. ಈ ನೀರಿಗೆ ಅರ್ಧ ಚಮಚ ಅಡುಗೆ ಸೋಡಾವನ್ನು ಹಾಕಿ. ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ತೂಕ ಇಳಿಯುತ್ತದೆ.
ಶುಂಠಿ ಟೀಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದಲೂ ತೂಕ ಕಡಿಮೆಯಾಗುತ್ತದೆ.
ನಿಂಬು ಪಾನಿಗೆ ಜೇನು ತುಪ್ಪವನ್ನು ಬೆರೆಸಿ ಕುಡಿಯುವುದರಿಂದಲೂ ತೂಕ ಇಳಿಸಿಕೊಳ್ಳಬಹುದು.