ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಕೊಂಡುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ. ಇದೀಗ ಮಸ್ಕ್ ಪುಣೆಯ ಟೆಕ್ಕಿಗೆ ಟ್ವೀಟ್ ಮಾಡಿರುವ ಪೋಸ್ಟ್ ಎಲ್ಲರ ಗಮನಸೆಳೆದಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ ಸಾಫ್ಟ್ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿರುವ ಪುಣೆ ಮೂಲದ ಭಾರತೀಯ ಪ್ರಣಯ್ ಪಾಥೋಲ್ ಟ್ವೀಟ್ ಗೆ ಮಸ್ಕ್ ಉತ್ತರಿಸಿದ್ದಾರೆ. ಪಾಥೋಲ್ ಅವರ ಟ್ವಿಟರ್ ಖಾತೆಯನ್ನು ತಾನು ನಡೆಸುತ್ತಿಲ್ಲ ಎಂದು ಮಸ್ಕ್ ಹೇಳಿದ್ದಾರೆ.
ಹೌದು, 1.6 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪಾಥೋಲ್ ಅವರು ಎಲೋನ್ ಮಸ್ಕ್, ತನ್ನ ಟ್ವಿಟ್ಟರ್ ಖಾತೆಯನ್ನು ನಡೆಸುತ್ತಿದ್ದಾರೆ ಎಂದು ಅನೇಕ ಜನರು ಭಾವಿಸುತ್ತಾರೆ. ಇದು ನಿಜ ಕೂಡ ಹೌದು. ಅವರೊಬ್ಬ ಬಹಳ ಬ್ಯುಸಿ ವ್ಯಕ್ತಿಯಾಗಿದ್ದರೂ ಸಹ ಬಹು ಟ್ವಿಟ್ಟರ್ ಖಾತೆಗಳನ್ನು ಉಪಯೋಗಿಸಲು ಸಮಯವನ್ನು ಕಂಡುಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ಮೂಲದ ಟೆಕ್ಕಿಯ ಟ್ವೀಟ್ ಗೆ ನಗುತ್ತಾ ಉತ್ತರಿಸಿದ ಮಸ್ಕ್, ತಾನು ರಹಸ್ಯ ಇನ್ಸ್ಟಾಗ್ರಾಂ ಖಾತೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಸ್ನೇಹಿತರು ತನಗೆ ಕಳುಹಿಸುವ ಲಿಂಕ್ಗಳನ್ನು ತಾನು ಕ್ಲಿಕ್ ಮಾಡಬಹುದು ಎಂದಿದ್ದಾರೆ.
ಅಂದಹಾಗೆ, ಎಲೋನ್ ಮಸ್ಕ್ ಮತ್ತು ಪಾಥೋಲ್ ಟ್ವಿಟ್ಟರ್ನಲ್ಲಿ ಸ್ನೇಹಿತರಾಗಿದ್ದಾರೆ. ಟೆಸ್ಲಾ ಸಿಇಒ ಮಸ್ಕ್, ಪಾಥೋಲ್ ಅವರ ಟ್ವೀಟ್ಗಳಿಗೆ ಪ್ರತ್ಯುತ್ತರ ನೀಡುವುದನ್ನು ಎಂದಿಗೂ ತಪ್ಪಿಸುವುದಿಲ್ಲ. 2018 ರಲ್ಲಿ, ಮಸ್ಕ್ ಮೊದಲ ಬಾರಿಗೆ ಪಾಥೋಲ್ಗೆ ಉತ್ತರಿಸಿದ್ದರು. ಅಂದಿನಿಂದ, ಅವರ ಟ್ವೀಟ್ ಗಳ ವಿನಿಮಯವು ಮುಂದುವರಿದಿದೆ. ಪಾಥೋಲ್, ಮಸ್ಕ್ ಅವರನ್ನು ಭೇಟಿಯಾಗಲು ಮತ್ತು ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯಲು ಬಯಸುತ್ತಾರೆ.
https://twitter.com/PPathole/status/1528414623778885632?ref_src=twsrc%5Etfw%7Ctwcamp%5Etweetembed%7Ctwterm%5E1528509438654525440%7Ctwgr%5E%7Ctwcon%5Es2_&ref_url=https%3A%2F%2Feconomictimes.indiatimes.com%2Fnews%2Findia%2Fim-not-running-your-twitter-account-elon-musk-tells-pune-techie%2Farticleshow%2F91735202.cms