alex Certify ನಿಮ್ಮ ಜಾತಕದಲ್ಲಿ ದೋಷವಿದ್ರೆ ಪರಿಹಾರಕ್ಕಾಗಿ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಜಾತಕದಲ್ಲಿ ದೋಷವಿದ್ರೆ ಪರಿಹಾರಕ್ಕಾಗಿ ಹೀಗೆ ಮಾಡಿ

ಯಾವುದೇ ಕೆಲಸ ಮಾಡಿದರೂ ಸರಿಯಾಗಿ ಕೈಗೂಡದೇ ಇರುವುದು ಏನಾದರೂ ತೊಂದರೆಗಳು ಕಾಣಿಸಿಕೊಳ್ಳುವುದು ಆಗಾಗ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ಮಾನಸಿಕ ನೆಮ್ಮದಿ ಇಲ್ಲದೇ ಇರುವಂತದ್ದು ಆಗುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ ಜಾತಕದಲ್ಲಿನ ದೋಷ.

ವ್ಯಕ್ತಿಯ ಉನ್ನತಿ, ಅವನತಿಗೆ ಅವನು ಹುಟ್ಟಿದ ಗಳಿಗೆ, ದಿನ, ವಾರಗಳೆಲ್ಲವೂ ಕೆಲವೊಮ್ಮೆ ಕಾರಣವಾಗುತ್ತದೆ. ಜಾತಕದಲ್ಲಿರುವ ದೋಷದಿಂದ ಕೆಲವೊಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅದನ್ನು ಪ್ರಾರಂಭದಲ್ಲಿಯೇ ಪರಿಹರಿಸಿಕೊಳ್ಳುವುದರಿಂದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಇಲ್ಲಿ ಜಾತಕದಲ್ಲಿನ ದೋಷವನ್ನು ಸುಲಭದಲ್ಲಿ ನಿವಾರಿಸಿಕೊಳ್ಳುವ ವಿಧಾನ ಇದೆ ನೋಡಿ.

ನಾವು ಸ್ನಾನ ಮಾಡುವ ನೀರಿಗೆ ತುಸು ಎಳ್ಳನ್ನು ಬೆರೆಸಿ ಸ್ನಾನ ಮಾಡುವುದರಿಂದ ನಮ್ಮ ಜಾತಕದಲ್ಲಿನ ದೋಷಗಳೆಲ್ಲಾ ನಿವಾರಣೆಯಾಗಿ ಲಕ್ಷ್ಮೀದೇವಿ ಒಲಿಯುತ್ತಾಳಂತೆ. ಇದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.

ಹಾಗೇ ಸ್ನಾನ ಮಾಡುವ ನೀರಿಗೆ ತುಸು ಹಾಲು ಬೆರೆಸಿದರೆ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿ ಆಯಸ್ಸು ಹಾಗೂ ಆರೋಗ್ಯ ಭಾಗ್ಯ ನಿಮ್ಮದಾಗುತ್ತದೆಯಂತೆ. ಇನ್ನು 1 ಏಲಕ್ಕಿ ಹಾಗೂ 4 ಎಸಳು ಕೇಸರಿ ದಳ ಬೆರೆಸಿ ಸ್ನಾನ ಮಾಡಿದರೆ ಜಾತಕದಲ್ಲಿನ ದೋಷಗಳು ನಿವಾರಣೆಯಾಗಿ ನೆಮ್ಮದಿ ದೊರಕುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...