ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತೆ ಮೇಕಪ್ ಉತ್ಪನ್ನದಲ್ಲಿರುವ ಈ ವಿಷಕಾರಿ ಅಂಶ 18-02-2023 6:30AM IST / No Comments / Posted In: Beauty, Latest News, Live News, Life Style ಮುಖ ಅಂದವಾಗಿ ಕಾಣಲು ಎಲ್ಲರೂ ಮೇಕಪ್ ಹಚ್ಚುತ್ತಾರೆ. ಆದರೆ ಕೆಲವು ಮೇಕಪ್ ಉತ್ಪನ್ನಗಳಲ್ಲಿ ವಿಷಕಾರಿ ಅಂಶಗಳಿರುತ್ತದೆ. ಇವು ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತವೆ. ಆದಕಾರಣ ಮೇಕಪ್ ಉತ್ಪನ್ನಗಳಲ್ಲಿ ಖರೀದಿಸುವಾಗ ಈ ವಿಷಕಾರಿ ಅಂಶವಿದೆಯೇ ಎಂಬುದನ್ನು ಗಮನಿಸಿ. ಮೊದಲಿಗೆ ಅವು ಯಾವುವು ಎಂಬುದನ್ನು ತಿಳುದುಕೊಳ್ಳಿ. ಥಾಲೇಟ್ಸ್: ಈ ರಾಸಾಯನಿಕವು ಡಿಯೋಡರೆಂಟ್, ನೇಲ್ ಪಾಲಿಷ್ ಮತ್ತು ಸುವಾಸನೆಯುಕ್ತ ಲಿಪ್ ಬಾಮ್ ನಂತಹ ಮೇಕಪ್ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಬಣ್ಣ ಮತ್ತು ಸುವಾಸನೆಯನ್ನು ಹಿಡಿದಿಡಲು ಇದನ್ನು ಬಳಸುತ್ತಾರೆ. ಲೀಡ್: ಲಿಪ್ ಸ್ಟಿಕ್ ಮತ್ತು ಟೂತ್ ಪೇಸ್ಟ್ ಗಳಲ್ಲಿ ಈ ಲೀಡ್ ನ್ನು ಬಳಸುತ್ತಾರೆ. ಈ ಹಾನಿಕಾರಕ ರಾಸಾಯನಿಕವು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಪಾಲಿಥಿಲೀನ್ ಗ್ಲೈಕೋಲ್ಸ್: ಇವು ಪೆಟ್ರೋಲಿಯಂ ಆಧಾರಿತ ಸಂಯುಕ್ತಗಳಾಗಿವೆ. ಇದನ್ನು ಕೆನೆ ಆಧಾರಿತ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ಸೌಂದರ್ಯವರ್ಧಕಗಳನ್ನು ದಪ್ಪವಾಗಿಸಲು, ಮೃದುಗೊಳಿಸಲು ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆಯಂತೆ