ಖರ್ಚಿಗೆ ಹಾಕಿ ಕಡಿವಾಣ, ದುಬಾರಿ ದುನಿಯಾದಲ್ಲಿ
ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡಿರುತ್ತದೆ.
ಮೊದಲಿನಂತೆ ಜೀವನ ನಡೆಸುವುದಕ್ಕೆ ಈಗ ತುಸು ಕಷ್ಟವೇ ಎನ್ನಬಹುದು. ಹಾಗಾಗಿ ಖರ್ಚುಗಳನ್ನು ಆದಷ್ಟೂ ಹಿತಮಿತವಾಗಿರಿಸಿಕೊಂಡು ಬದುಕುವುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್.
ಈಗ ಮಳೆಗಾಲ ಫ್ಯಾನ್ ಅವಶ್ಯಕತೆ ಅಷ್ಟಾಗಿ ಇರುವುದಿಲ್ಲ. ಹಾಗಾಗಿ ಆದಷ್ಟೂ ಫ್ಯಾನ್ ಬಳಕೆ ಕಡಿಮೆ ಮಾಡಿ. ಟಿವಿ ಹಾಗೂ ಲೈಟ್ ಬಳಕೆ ಕೂಡ ಕಡಿಮೆ ಮಾಡಿ. ಕೆಲವರು ಲೈಟ್ ಹಾಕಿ ಆಫ್ ಮಾಡದೇ ಹೋಗುವವರು ಇದ್ದಾರೆ. ಹಾಗೇ ಟಿವಿ ಆನ್ ಮಾಡಿಕೊಂಡು ಮೊಬೈಲ್ ನೋಡುತ್ತಾ ಕೂರುತ್ತಾರೆ. ಇದರಿಂದ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು.
ಇನ್ನು ಅಡುಗೆ ಮಾಡುವಾಗ ಸಿಕ್ಕಾಪಟ್ಟೆ ಮಾಡಿ ಹಾಳು ಮಾಡುವ ಬದಲು ದಿನಕ್ಕೆ ಎಷ್ಟು ಬೇಕೋ ಅಷ್ಟೇ ಮಾಡಿ. ಸೊಪ್ಪು, ತರಕಾರಿಗಳನ್ನು ಹಾಳಾಗದಂತೆ ಕಾಪಾಡಿಕೊಳ್ಳಿ. ಇದರಿಂದ ವೇಸ್ಟ್ ಮಾಡುವುದನ್ನು ತಪ್ಪಿಸಬಹುದು. ಗ್ಯಾಸ್ ಅನ್ನು ಕೂಡ ಹಿತಮಿತವಾಗಿ ಬಳಸಿ.
ಇನ್ನು ಕಣ್ಣಿಗೆ ಕಂಡ ಬಟ್ಟೆಗಳನ್ನು ತಂದು ಮನೆಯಲ್ಲಿ ತುಂಬಿಕೊಳ್ಳುವ ಬದಲು ಇರುವ ಬಟ್ಟೆಗಳನ್ನು ಉಪಯೋಗಿಸಿಕೊಳ್ಳಿ. ಅನಗತ್ಯವಾಗಿ ಬಟ್ಟೆಗೆ ದುಡ್ಡು ಹಾಕಬೇಡಿ.
ಸಣ್ಣಪುಟ್ಟ ಉಳಿತಾಯ ಮಾಡುವುದನ್ನು ಕಲಿತುಕೊಂಡರೆ ಜೀವನದಲ್ಲಿ ಬರುವ ಕಷ್ಟವನ್ನು ಎದುರಿಸುವುದಕ್ಕೆ ಸಹಾಯಕವಾಗಲಿದೆ.