ಮನೆಗೊಂದು ಹೊಸ ರೂಪ ನೀಡಲು ಅನೇಕ ಮಂದಿ ತಮ್ಮ ಮನೆಯ ಬಣ್ಣವನ್ನು ಪದೇ ಪದೇ ಬದಲಾಯಿಸುತ್ತಿರುತ್ತಾರೆ. ಮನೆಯ ಗೋಡೆಗೆ ಬಳಿಯುವ ಬಣ್ಣ ಕೂಡ ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ.
ನೀಲಿ ಬಣ್ಣ : ಮನೆಯ ಯಾವ ಭಾಗಕ್ಕೆ ಹೆಚ್ಚು ಬಿಸಿಲು ಬರುತ್ತದೆಯೋ ಆ ಭಾಗದ ಗೋಡೆಗೆ ನೀಲಿ ಬಣ್ಣವನ್ನು ಬಳಿಯಬೇಡಿ.
ಹಳದಿ ಬಣ್ಣ : ಮನೆಯ ದಕ್ಷಿಣ-ಉತ್ತರ ಭಾಗಕ್ಕೆ ಹಳದಿ ಬಣ್ಣವನ್ನು ಹಚ್ಚಿ. ಇದು ನಿಮ್ಮ ಕುಟುಂಬಸ್ಥರಿಗೆ ಹೊಸ ಶಕ್ತಿ ತುಂಬುತ್ತದೆ.
ಕೆಂಪು ಬಣ್ಣ : ಮನೆಯ ಸದಸ್ಯರಿಗೆ ಮೂತ್ರಪಿಂಡ, ಶೀತ, ಕೆಮ್ಮಿನ ಸಮಸ್ಯೆಯಿದ್ದರೆ ಗೋಡೆಗೆ ಕೆಂಪು ಬಣ್ಣವನ್ನು ಬಳಿಯಿರಿ. ಇದು ರೋಗಿಗಳಿಗೆ ಹೊಸ ಶಕ್ತಿಯನ್ನು ನೀಡುತ್ತದೆ.
ಬಿಳಿ ಬಣ್ಣ : ಬಿಳಿ ಬಣ್ಣ ಶಾಂತಿಯ ಪ್ರತೀಕ. ಹಾಗಾಗಿ ಮನೆಯ ಕಂಬಗಳಿಗೆ ಬಿಳಿ ಬಣ್ಣವನ್ನು ಬಳಿಯಲಾಗುತ್ತದೆ. ಇದು ಮನೆಯ ವಾತಾವರಣ ಹಾಗೂ ತಾಪಮಾನವನ್ನು ಉತ್ತಮವಾಗಿಡುತ್ತದೆ.
ಹಸಿರು : ಆಸ್ಪತ್ರೆಗಳಲ್ಲಿ ಈ ಬಣ್ಣವನ್ನು ಹೆಚ್ಚಾಗಿ ನೋಡಬಹುದಾಗಿದೆ. ಇದಕ್ಕೆ ರೋಗವನ್ನು ಗುಣಪಡಿಸುವ ಶಕ್ತಿ ಇದೆ ಎನ್ನಲಾಗುತ್ತದೆ.