ಕೈನಲ್ಲಿರುವ ರೇಖೆಗಳು ನಮ್ಮ ಭವಿಷ್ಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಹೇಳುತ್ತವೆ. ಕೈನಲ್ಲಿ ಅರ್ಧ ಚಂದ್ರನ ಚಿಹ್ನೆ ಹೊಂದಿದ್ದರೆ ಅದು ಶುಭ ಎನ್ನಲಾಗುತ್ತದೆ. ಈ ರೇಖೆ ಹೊಂದಿರುವ ಜನರು ಲಾಭದ ಮೇಲೆ ಲಾಭ ಪಡೆಯುತ್ತಾರೆ. ಕೈನಲ್ಲಿ ಅರ್ಧ ಚಂದ್ರ ರೇಖೆ ಹೊಂದಿರುವವರು ಇದನ್ನು ಹೇಳುವುದಿಲ್ಲ. ಕೆಲ ಭಾಗಗಳಲ್ಲಿ ಇದನ್ನು ಅಶುಭ ಎನ್ನಲಾಗುತ್ತದೆ. ಆದ್ರೆ ಇದ್ರಿಂದ ಸಾಕಷ್ಟು ಲಾಭವಿದೆ ಎಂದು ಹಸ್ತರೇಖಾ ಶಾಸ್ತ್ರದಲ್ಲಿ ಹೇಳಲಾಗಿದೆ.
ಎರಡು ಕೈಗಳನ್ನು ಕೂಡಿಸಿದಾಗ ಅರ್ಧ ಚಂದ್ರ ರೇಖೆ ಕಾಣಿಸುತ್ತದೆ. ಇದು ಶುಭ ಚಿಹ್ನೆ. ಎಲ್ಲರ ಕೈನಲ್ಲಿ ಇದು ಮೂಡುವುದಿಲ್ಲ. ಈ ರೇಖೆ ಹೊಂದಿರುವ ಜನರು ಆಕರ್ಷಕ ಹಾಗೂ ಒಳ್ಳೆ ಸ್ವಭಾವದವರಾಗಿರುತ್ತಾರೆ.
ಕಷ್ಟದ ಸಂದರ್ಭದಲ್ಲೂ ಧನಾತ್ಮಕವಾಗಿ ಚಿಂತಿಸುವವರಾಗಿರುತ್ತಾರೆ. ಹಾಗಾಗಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.
ತಮ್ಮ ಭಾವನೆಗಳನ್ನು ಮರೆಮಾಚಲು ಇವರು ಯತ್ನಿಸುತ್ತಾರೆ. ಇದೇ ಕಾರಣಕ್ಕೆ ಅವ್ರು ಪ್ರೀತಿಯಲ್ಲಿ ಅನೇಕ ಬಾರಿ ಮೋಸ ಹೋಗ್ತಾರೆ.