ಧೂಳು, ಮಣ್ಣು ಮತ್ತು ಬಿಸಿಲಿನಿಂದ ಪಾರಾಗಲು ಸಾಮಾನ್ಯವಾಗಿ ಜನರು ಕಾರಿನ ಕಿಟಕಿ ಗಾಜುಗಳನ್ನು ಯಾವಾಗ್ಲೂ ಮುಚ್ಚಿಕೊಂಡೇ ಪ್ರಯಾಣಿಸ್ತಾರೆ. ಹಾಗೆ ಮಾಡಿದ್ರೆ ತಾವು ಸುರಕ್ಷಿತವಾಗಿರಬಹುದು ಎಂದುಕೊಳ್ತಾರೆ. ಆದ್ರೆ ಕೇವಲ ಹೊರಗಿನ ವಾತಾವರಣ ಮಾತ್ರವಲ್ಲ ಕಾರ್ ನಲ್ಲೂ ನೀವು ಸೇಫ್ ಅಲ್ಲ.
ಸಂಶೋಧನೆಯೊಂದರ ಪ್ರಕಾರ ಕಾರಿನ ಕ್ಯಾಬಿನ್ ನಲ್ಲೇ ಸಾಕಷ್ಟು ಹಾನಿಕಾರಕ ಕಣಗಳಿರುತ್ತವೆ. ವಿಜ್ಞಾನಿಗಳ ಊಹೆಯನ್ನೂ ಮೀರಿ ಅಧಿಕ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಹಾಗೂ ರಾಸಾಯನಿಕಗಳು ಪತ್ತೆಯಾಗಿವೆ. ಅವು ಆಕ್ಸಿಡೀಕರಣದ ಒತ್ತಡ ಸೃಷ್ಟಿಸಬಹುದು.
ಅಷ್ಟೇ ಅಲ್ಲ, ಕಾರಿನಲ್ಲಿರುವ ಬ್ಯಾಕ್ಟೀರಿಯಾ, ಧೂಳು ಮತ್ತು ರಾಸಾಯನಿಕಗಳಿಂದ ಶ್ವಾಸ ಮತ್ತು ಹೃದಯದ ತೊಂದರೆ, ಕ್ಯಾನ್ಸರ್, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ವಿಜ್ಞಾನಿಗಳ ಸಂಶೋಧನೆ ಪ್ರಕಾರ ಕಾರಿನಲ್ಲಿ ಜನಸಂದಣಿ ಹೆಚ್ಚಿದ್ದಷ್ಟು ರೋಗಗಳ ಆತಂಕವೂ ಹೆಚ್ಚು.
ಕಾರಿನಲ್ಲಿರೋ ಹಾನಿಕಾರಕ ಕಣಗಳು ನಮ್ಮ ಜೀವಕೋಶ ಮತ್ತು ಡಿಎನ್ಎ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹಾಗಾಗಿ ಎಲ್ಲರೂ ತಮ್ಮ ಡ್ರೈವಿಂಗ್ ಹ್ಯಾಬಿಟ್ ಗಳ ಬಗ್ಗೆ ಯೋಚನೆ ಮಾಡಲೇಬೇಕು. ಆದಷ್ಟು ವಾತಾವರಣದಲ್ಲಿರುವ ಗಾಳಿಯನ್ನೇ ಸೇವಿಸುವುದು ಉತ್ತಮ.