
ಜ್ಯೋತಿಷ್ಯದ ನಂಬಿಕೆಗಳ ಪ್ರಕಾರ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ನಮ್ಮ ಕಷ್ಟಗಳಿಂದ ಹೊರ ಬರಬಹುದು. ಪೂಜೆಯ ಜೊತೆ ಪ್ರತಿನಿತ್ಯ ಕೆಲವು ಜೀವಿಗಳಿಗೆ ಆಹಾರ ನೀಡಿದರೆ ನಮ್ಮ ಕೆಟ್ಟ ಕರ್ಮಗಳು ಕರಗುತ್ತವೆ ಎನ್ನುವ ನಂಬಿಕೆ ಇದೆ. ಹಾಗಾದರೆ ಯಾವ ಪ್ರಾಣಿಗಳಿಗೆ ಆಹಾರ ನೀಡಿದರೆ ಯಾವ ಫಲಾಪೇಕ್ಷೇ ಈಡೇರುತ್ತದೆ ನೋಡೋಣ ಬನ್ನಿ.
ಹಸು : ಗೋ ಮಾತೆಗೆ ನಿತ್ಯವು ಹಸಿರು ಹುಲ್ಲನ್ನು ನೀಡುವುದರಿಂದ ಸಂತಾನದ ಅಪೇಕ್ಷೆ ಇರುವವರಿಗೆ ಸಂತಾನವಾಗುತ್ತದೆ ಎನ್ನಲಾಗುತ್ತದೆ. ಭೂಮಿ ಸಂಬಂಧಿತ ಕೆಲಸಗಾರರಿಗೆ ಅನುಕೂಲವಾಗುತ್ತದೆ. ನವಗ್ರಹಗಳ ದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.
ಮೀನು : ಮೀನು ನಿಮಗೆ ಬರಬಹುದಾದ ಸಮಸ್ಯೆ ನಿವಾರಿಸುತ್ತದೆ. ನೀವು ಸಾಲದ ಸಮಸ್ಯೆಯಿಂದ ಹೊರಬರಬೇಕು ಎಂದಿದ್ದರೆ ಮೀನಿಗೆ ಆಹಾರ ನೀಡಿ. ಬೆಳಿಗ್ಗೆ ಮತ್ತು ಸಂಜೆ ಆಹಾರ ನೀಡಬೇಕು.
ನಾಯಿ : ನಾಯಿಗಳಿಗೆ ಆಹಾರ ನೀಡುವುದರಿಂದ ಕಷ್ಟಗಳು ಬಗೆಹರಿಯುತ್ತದೆ. ಒಂದು ವೇಳೆ ಶ್ವಾನಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅದು ಕೆಟ್ಟ ಕರ್ಮವಾಗಿ ಇನ್ನಷ್ಟು ಕಷ್ಟಕ್ಕೆ ತಳ್ಳುತ್ತದೆ.
ಇರುವೆ: ನಿಮ್ಮ ಮನೋಭಿಲಾಷೆ ಈಡೇರಿಕೆಗೆ ಇರುವೆಗಳಿಗೆ ಸಕ್ಕರೆ ಹಾಕಿದರೆ ನಿಮ್ಮ ಆಸೆ ಫಲಿಸುತ್ತದೆ.
ಪಕ್ಷಿಗಳು : ಹಕ್ಕಿ , ಪಕ್ಷಿಗಳಿಗೆ ಆಹಾರ, ನೀರು ಇಡುವುದರಿಂದ ನಿಮ್ಮ ಮನೆ ಸಮೃದ್ಧಿಯಿಂದ ಕೂಡಿರುತ್ತದೆ. ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗುತ್ತದೆ.
ಇದಿಷ್ಟೇ ಅಲ್ಲದೇ ಹಸಿವಿನಿಂದ ಕಾಣುವ ಯಾವುದೇ ಜೀವಿಗೆ ಆಹಾರ, ನೀರು ಕೊಟ್ಟರೆ ಭಗವಂತ ಖಂಡಿತಾ ನಿಮ್ಮ ಕೈ ಹಿಡಿಯುತ್ತಾನೆ. ಆದ್ದರಿಂದ ಹಸಿದ ಎಲ್ಲಾ ಜೀವಗಳಿಗೂ ಅನ್ನಪೂರ್ಣೆಯ ಕೃಪೆ ದೊರೆಯಲು ನೀವು ಸಹಕರಿಸಿದಂತೆ ಆಗುತ್ತದೆ.