
ಗುರುವಾರ ಗುರುವನ್ನು ಪೂಜಿಸುವ ದಿನವಾಗಿದೆ. ಹಾಗಾಗಿ ಗುರುವಾರದಂದು ಮಾಡುವ ಕೆಲಸಕ್ಕೆ ಹೆಚ್ಚಿನ ಮಹತ್ವವಿದೆ. ಗುರುವಾರದಂದು ಮಾಡುವ ಕೆಲಸ ಗುರುಗಳ ಕೃಪೆಯಿಂದ ಯಶಸ್ವಿಯಾಗುತ್ತದೆಯಂತೆ. ಹಾಗಾಗಿ ನಿಮ್ಮ ಮನೆಯಲ್ಲಿ ಸಮಸ್ಯೆ ಇದ್ದರೆ ಗುರುವಾರದಂದು ಈ ಪರಿಹಾರ ಮಾಡಿ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.
ಗುರುವಾರದಂದು ಒಂದು ನಿಂಬೆ ಹಣ್ಣಿನಿಂದ ನಿಮ್ಮ ಕಷ್ಟಗಳೆಲ್ಲವನ್ನು ಪರಿಹರಿಸಿಕೊಳ್ಳಬಹುದು. ನಿಮ್ಮ ದುಃಖ, ಕಷ್ಟ ಕಡಿಮೆಯಾಗುತ್ತದೆ. ಗುರುಬಲ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹಾಗಾಗಿ ಗುರುವಾರದಂದು ಸಂಜೆ ನಿಂಬೆ ಹಣ್ಣನ್ನು ತೆಗೆದುಕೊಂಡು ಅದಕ್ಕೆ ಅರಶಿನ ಕುಂಕುಮ ಹಚ್ಚಿ ದೇವರ ಮುಂದೆ ಇಟ್ಟು ಪೂಜೆ ಮಾಡಿ. ” ಓಂ ನಮಃ ಭಗವತಿ ವಾಸುದೇವಾಯ ನಮಃ” ಈ ಮಂತ್ರವನ್ನು 21 ಬಾರಿ ಜಪಿಸಬೇಕು.
ಬಳಿಕ ಬಲಗೈಯಲ್ಲಿ ನಿಂಬೆ ಹಣ್ಣನ್ನು ಇಟ್ಟುಕೊಂಡು ನಿಮ್ಮ ಕಷ್ಟಗಳನ್ನು ಹೇಳಿ ಪರಿಹರಿಸುವಂತೆ ಬೇಡಿಕೊಳ್ಳಿ. ಬಳಿಕ ಪ್ರದಕ್ಷಿಣೆಯಾಗಿ ನಿಂಬೆ ಹಣ್ಣನ್ನು ಸುತ್ತಿಸಿ ಒಂದು ರಾತ್ರಿ ಅದನ್ನು ದೇವರ ಮನೆಯಲ್ಲಿ ಇಡಿ. ಮರುದಿನ ಬೆಳಿಗ್ಗೆ ದೇವರಿಗೆ ಪೂಜೆ ಮಾಡಿ ನಿಂಬೆ ಹಣ್ಣನ್ನು ತೆಗೆದುಕೊಂಡು ಅರಶಿನ ಕುಂಕುಮ ಹಚ್ಚಿ ಅದನ್ನು 4 ಭಾಗವಾಗಿ ಕತ್ತರಿಸಿ ಮನೆಯ ನಾಲ್ಕು ದಿಕ್ಕುಗಳಲ್ಲಿ ಇಡಬೇಕು.