ಮನುಷ್ಯ ಯಾವುದೇ ಧರ್ಮದವನಾಗಿರಲಿ, ಧಾರ್ಮಿಕ ಸ್ಥಳದಲ್ಲಿ ಆತ ತನ್ನ ಬೇಡಿಕೆಯನ್ನು ದೇವರ ಮುಂದಿಡ್ತಾನೆ. ಅನೇಕ ಬಾರಿ ಆತನ ಆಸೆ ಈಡೇರುತ್ತದೆ. ಹಾಗೆ ನಿಮ್ಮ ಮುಂದೆ ಕೆಲವೊಂದು ಘಟನೆಗಳು ನಡೆದ್ರೆ ಅದನ್ನು ನಿರ್ಲಕ್ಷಿಸಬೇಡಿ.
ಆ ಘಟನೆಗಳಿಗೆ ನಿಮ್ಮ ಬೇಡಿಕೆ ಈಡೇರಿಸುವ ಶಕ್ತಿ ಇದೆ ಎಂಬುದನ್ನು ಮರೆಯಬೇಡಿ. ನಿಮ್ಮ ಕಣ್ಣ ಮುಂದೆ ಪದೇ ಪದೇ ಆ ಘಟನೆಗಳು ನಡೆಯುವುದಿಲ್ಲ. ಒಮ್ಮೆ ನಡೆದಾಗ ಅದನ್ನು ನಿರ್ಲಕ್ಷಿಸಬೇಡಿ.
ನಿಸರ್ಗದಲ್ಲಿ ನಡೆಯುವ ಘಟನೆಗಳಲ್ಲಿ ಶವಯಾತ್ರೆ ಕೂಡ ಒಂದು. ಹಿಂದು ಧರ್ಮದ ಪ್ರಕಾರ ಶವಯಾತ್ರೆ ನಿಮ್ಮ ಮುಂದೆ ಹಾದು ಹೋದಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳಿ. ಹೀಗೆ ಮಾಡಿದ್ರೆ ನಿಮ್ಮ ಆಸೆ ಈಡೇರಲಿದೆ ಎಂಬ ನಂಬಿಕೆ ಹಿಂದುಗಳದ್ದು.
ಹಿಂದು ಧರ್ಮದಲ್ಲಿ ಹಸುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ದಾರಿ ಮಧ್ಯೆ ಆಕಳು ತನ್ನ ಕರುವಿಗೆ ಹಾಲುಣಿಸುತ್ತಿರುವುದು ಕಂಡಲ್ಲಿ ಕೈಮುಗಿದು ಗೋ ಮಾತೆಯ ಮುಂದೆ ನಿಮ್ಮ ಬೇಡಿಕೆ ಇಡಿ. ಗಮನವಿರಲಿ, ಹಸುವಿನ ಕಾಲು ಮುಟ್ಟಿ ನಮಸ್ಕರಿಸುವ ಸಹವಾಸಕ್ಕೆ ಹೋಗಬೇಡಿ. ದೂರದಿಂದಲೇ ಗೋಮಾತೆಗೆ ನಮಸ್ಕರಿಸಿ.
ರಾಮ್ ಕಥಾ ಆಯೋಜನೆ ಮಾಡಿದ್ದು ಕೇಳಿ ಬಂದಲ್ಲಿ ಅಲ್ಲಿಗೆ ಹೋಗಿ ಪ್ರಾರ್ಥನೆ ಮಾಡಿಕೊಳ್ಳಿ. ಎಲ್ಲಿ ರಾಮ್ ಕಥಾ ನಡೆಯುತ್ತಿರುತ್ತದೆಯೋ ಅಲ್ಲಿ ಹನುಮಂತ ಇದ್ದೇ ಇರ್ತಾನೆ. ರಾಮನ ಭಕ್ತ ಹನುಮಂತನ ಕೃಪೆ ನಿಮಗೆ ಸಿಗುತ್ತೆ ಎಂದು ಹಿಂದು ಧರ್ಮದಲ್ಲಿ ನಂಬಲಾಗಿದೆ.