ನಿದ್ರೆ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ರೆಯಲ್ಲಿ ಏರುಪೇರಾದ್ರೆ ಆರೋಗ್ಯ ಸಮಸ್ಯೆ ಕಾಡುತ್ತದೆ. ನಿದ್ರೆಗೂ ವಾಸ್ತು ಶಾಸ್ತ್ರಕ್ಕೂ ಸಂಬಂಧವಿದೆ. ವ್ಯಕ್ತಿ ಮಲಗುವ ದಿಕ್ಕು, ಅವನ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ದಿಕ್ಕಿನಲ್ಲಿ ಮಲಗುವುದು ಅವಶ್ಯಕ.
ವಾಸ್ತು ಪ್ರಕಾರ ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗುವುದು ಶುಭಕರ. ಈ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದ್ರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಮಲಗುವುದು ಓದುವಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ವಾಸ್ತು ಪ್ರಕಾರ, ಪಶ್ಚಿಮ ದಿಕ್ಕಿಗೆ ತಲೆಯಿಟ್ಟು ಮಲಗುವುದು ಸಹ ಪ್ರಯೋಜನಕಾರಿಯಾಗಿದೆ. ಇದು ಕೀರ್ತಿಯನ್ನು ಹೆಚ್ಚಿಸುತ್ತದೆ.
ವಾಸ್ತು ಪ್ರಕಾರ ಉತ್ತರವನ್ನು ಅತ್ಯಂತ ಶುಭ ದಿಕ್ಕೆಂದು ಪರಿಗಣಿಸಲಾಗಿದ್ದರೂ, ಈ ದಿಕ್ಕಿನ ಕಡೆಗೆ ತಲೆಯಿಟ್ಟು ಮಲಗುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಈ ದಿಕ್ಕಿಗೆ ತಲೆಯಿಟ್ಟು ಮಲಗುವುದ್ರಿಂದ ನಿದ್ರೆಯ ಮೂಲಕ ದೇಹದಲ್ಲಿ ರೋಗಗಳು ಉದ್ಭವಿಸುತ್ತವೆ.
ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗುವುದು ಪ್ರಯೋಜನಕಾರಿ. ನಕಾರಾತ್ಮಕ ಶಕ್ತಿ ಬರುವುದಿಲ್ಲ. ಒತ್ತಡ ಕಡಿಮೆಯಾಗುತ್ತದೆ. ಸುಖ-ಸಮೃದ್ಧಿ ಹೆಚ್ಚಾಗುತ್ತದೆ. ಹಾಗೆ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ.
ಹರಿದ ಹಾಸಿಗೆ, ಮುರಿದ ಮಂಚ, ಕೊಳಕಾದ ಹಾಸಿಗೆ ಮೇಲೆ ಮಲಗಬಾರದು. ಬೆತ್ತಲಾಗಿ ಎಂದೂ ನಿದ್ರೆ ಮಾಡಬಾರದು. ಸೂರ್ಯೋದಯದ ನಂತ್ರ ಹಾಗೂ ಸೂರ್ಯಾಸ್ತದ ಮೊದಲು ಮಲಗಬಾರದು. ನಿರ್ಜನ ಮನೆ, ಸ್ಮಶಾನ, ಗರ್ಭಗುಡಿ, ದೇವರ ಮನೆ, ಕತ್ತಲ ಕೋಣೆಯಲ್ಲಿ ಮಲಗಬಾರದು.