ಆಭರಣಗಳು ಅಥವಾ ಕೆಲವು ಅಲಂಕಾರಗಳು ಕೇವಲ ಸೌಂದರ್ಯ ಹೆಚ್ಚಿಸುತ್ತದೆಂದು ನಾವು ಭಾವಿಸುತ್ತೇವೆ. ಹೀಗೆ ಧರಿಸುವ ಆಭರಣ, ಮಾಡಿಕೊಳ್ಳುವ ಅಲಂಕಾರ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ.
ಸಿಂಧೂರ: ಹಣೆಯ ಮೇಲೆ ಸಿಂಧೂರವಿಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಸುತ್ತಲಿರುವ ಜನರಲ್ಲಿ ಭಾವನಾತ್ಮಕ ಸಂಬಂಧ ಮೂಡುತ್ತದೆ ಮತ್ತು ದೇಹದಲ್ಲಿನ ನೀರಿನ ತೊಂದರೆಯನ್ನು ನಿವಾರಿಸುತ್ತದೆ.
ಕಿವಿಯ ಆಭರಣ: ಕಿವಿಯಲ್ಲಿ ಧರಿಸುವ ಆಭರಣಗಳಿಂದ ಮೂಗು, ಗಂಟಲು, ಕಿವಿಗಳ ಸಮಸ್ಯೆಯನ್ನು ದೂರ ಮಾಡುತ್ತದೆ. ಕಿವಿಯ ಆಭರಣದಿಂದ ಟಾನ್ಸಿಲ್ ತೊಂದರೆಗಳು ದೂರವಾಗುತ್ತವೆ.
ಬಾಜುಬಂದಿ (ಕೈ ತೋಳಿಗೆ ಧರಿಸುವ ಆಭರಣ): ಚಿನ್ನ ಅಥವಾ ಪಂಚಲೋಹದ ಬಾಜುಬಂದಿ ಧರಿಸುವುದರಿಂದ ಹೃದಯದ ಮತ್ತು ಲಿವರ್ ಸಮಸ್ಯೆಗಳು ದೂರವಾಗುತ್ತವೆ. ಇದನ್ನು ಧರಿಸುವುದರಿಂದ ರಕ್ತಸಂಚಾರ ಸರಾಗವಾಗುತ್ತದೆ ಮತ್ತು ಸ್ನಾಯು ಸಂಬಂಧಿ ತೊಂದರೆಗಳು ದೂರವಾಗುತ್ತವೆ.
ಉಂಗುರ: ಉಂಗುರ ಧರಿಸುವುದರಿಂದ ಹಲ್ಲು, ವಸಡು, ಕಿವಿ, ಎದೆ ಮತ್ತು ನಿದ್ರೆಗೆ ಸಂಬಂಧಪಟ್ಟ ತೊಂದರೆಗಳು ನಿವಾರಣೆಯಾಗುತ್ತವೆ.
ಸೊಂಟದ ಪಟ್ಟಿ: ಸೊಂಟದ ಭಾಗದಲ್ಲಿ ಧರಿಸುವ ಈ ಆಭರಣ ಬೆನ್ನಿನ ಮೂಳೆ, ಸೊಂಟ ಹಾಗೂ ಚರ್ಮದ ಆರೋಗ್ಯ ಕಾಪಾಡುತ್ತದೆ. ಪಚನಕ್ರಿಯೆಗೂ ಇದು ಸಹಕಾರಿ.
ಕಾಲುಂಗುರ: ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣುವ ಸಂಧಿವಾತ ಸಮಸ್ಯೆಗಳು ಇದರಿಂದ ಗುಣವಾಗುತ್ತದೆ.