ಜಾತಕದಲ್ಲಿ ಕಾಣಿಸಿಕೊಳ್ಳುವ ದೋಷ ವ್ಯಕ್ತಿಯ ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆ. ಜಾತಕ ದೋಷದಿಂದಾಗಿ ಎಷ್ಟು ಪ್ರಯತ್ನಪಟ್ಟರೂ ವೈಫಲ್ಯ ಬೆನ್ನು ಬಿಡುವುದಿಲ್ಲ.
ಆದ್ರೆ ನಮ್ಮ ಗ್ರಂಥದಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಜಾತಕ ದೋಷವನ್ನು ಸರಳ ಉಪಾಯಗಳಿಂದಾಗಿ ಕಡಿಮೆ ಮಾಡಿ ಸಫಲತೆ ಕಾಣಬಹುದಾಗಿದೆ.
ಶಿವಪುರಾಣದ ಪ್ರಕಾರ ಪ್ರತಿದಿನ ಒಂದು ಲೋಟ ನೀರನ್ನು ಶಿವಲಿಂಗಕ್ಕೆ ಅರ್ಪಣೆ ಮಾಡುವುದ್ರಿಂದ ಶಿವ ಪ್ರಸನ್ನನಾಗ್ತಾನೆ. ಭಕ್ತರ ಇಚ್ಛೆ ಈಡೇರುತ್ತದೆ. ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. ಓಂ ನಮಃ ಶಿವಾಯ ಮಂತ್ರ ಪಠಿಸಬೇಕು.
ರಾತ್ರಿ ಮಲಗುವ ವೇಳೆ ತಲೆ ಬದಿಯಲ್ಲಿ ತಾಮ್ರದ ಲೋಟದಲ್ಲಿ ನೀರನ್ನು ಇಟ್ಟು ಮಲಗಿ. ಬೆಳಿಗ್ಗೆ ಎದ್ದ ತಕ್ಷಣ 7 ಬಾರಿ ಲೋಟವನ್ನು ತಲೆಗೆ ಸುಳಿದು ನಂತ್ರ ಆ ನೀರನ್ನು ಮುಳ್ಳಿನ ಗಿಡದ ಬುಡಕ್ಕೆ ಹಾಕಿ. ಮನೆ ಬಳಿ ಮುಳ್ಳಿನ ಗಿಡವಿಲ್ಲವಾದ್ರೆ ಬೇರೆ ಯಾವುದಾದ್ರೂ ಗಿಡದ ಬುಡಕ್ಕೆ ಹಾಕಿ.
ಪ್ರತಿದಿನ ಬೆಳಿಗ್ಗೆ ಸೂರ್ಯ ದೇವನಿಗೆ ನೀರನ್ನು ಅರ್ಪಿಸಿ. ಸ್ನಾನದ ನಂತ್ರ ತಾಮ್ರದ ಲೋಟದಲ್ಲಿ ನೀರನ್ನು ಹಾಕಿ. ಇದಕ್ಕೆ ಕೆಂಪು ಹೂ, ಕುಂಕುಮ, ಅಕ್ಕಿಯನ್ನು ಹಾಕಿ ನಂತ್ರ ಸೂರ್ಯ ದೇವನಿಗೆ ಅರ್ಪಿಸಿ. ಓಂ ಸೂರ್ಯಾಯ ನಮಃ ಮಂತ್ರವನ್ನು ಪಠಿಸಿ. ಪ್ರತಿದಿನ ಹೀಗೆ ಮಾಡಿದ್ರೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ.
ಶುಭ ಮುಹೂರ್ತದಲ್ಲಿ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ವಿಷ್ಣುವಿನ ಒಂದು ರೂಪವಾಗಿರುವ ಅಶ್ವತ್ಥ ಮರದಲ್ಲಿ ಎಲ್ಲ ದೇವಾನುದೇವತೆಗಳಿವೆ ಎಂದು ನಂಬಲಾಗಿದೆ. ಪ್ರತಿದಿನ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸುವುದ್ರಿಂದ ಸುಖ-ಶಾಂತಿ ಪ್ರಾಪ್ತಿಯಾಗಲಿದೆ.