ಬೆಂಗಳೂರು: ಮನುಷ್ಯನಲ್ಲಿ ಶುಗರ್ ಲೆವಲ್ ಎಷ್ಟಿರಬೇಕು? ಅಂದರೆ ವ್ಯಕ್ತಿಯ ರಕ್ತದಲ್ಲಿ ಗ್ಲೂಕೋಸ್ ಲೆವಲ್ ಎಷ್ಟು ಇರಬೇಕು? ಎಂಬ ಬಗ್ಗೆ ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ವಿವರಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ರಕ್ತದಲ್ಲಿ ಅವಶ್ಯಕತೆಗೆ ತಕ್ಕಷ್ಟು ಶುಗರ್ ಅಥವಾ ಗ್ಲೂಕೊಸ್ ಲೆವಲ್ ಇರಬೇಕು. ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಶುಗರ್ ಪ್ರಮಾಣ ಇದ್ದರೆ ಅದನ್ನು ಲೋ ಶುಗರ್ ಲೆವಲ್ ಅಥವಾ ಹೈಪೋ ಗ್ಲೈಸಿಮಿಯಾ ಎಂದು ಕರೆಯುತ್ತಾರೆ. ಒಂದು ವೇಳೆ ಅವಶ್ಯಕತೆಗೆ ಹೆಚ್ಚಿನ ಪ್ರಮಾಣದಲ್ಲಿ ಶುಗರ್ ಅಂಶ ರಕ್ತದಲ್ಲಿದ್ದರೆ ಅದನ್ನು ಹೈ ಶುಗರ್ ಅಥವಾ ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆ ಎಂದು ಕರೆಯುತ್ತೇವೆ.
ಹಾಗಾದರೆ ನಮ್ಮ ದೇಹದಲ್ಲಿ ಶುಗರ್ ಲೆವಲ್ ಅವಶ್ಯಕತೆಗಿಂತ ಹೆಚ್ಚಾಗಿದೆ ಅಥವಾ ಕಡಿಮೆಯಾಗಿದೆ ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ? ಶುಗರ್ ಅಥವಾ ಡಯಾಬಿಟಿಸ್ ಅಂದರೆ ಏನು? ಎಂಬಿತ್ಯಾದಿ ಮಹತ್ವದ ಆರೋಗ್ಯ ಸಲಹೆ ಬಗ್ಗೆ ಡಾ. ರಾಜು ಅವರ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.