ಆರೋಗ್ಯಕರ ಲೈಂಗಿಕ ಬದುಕು ಕೂಡ ಫಿಟ್ನೆಸ್ ಮಂತ್ರಗಳಲ್ಲೊಂದು. ಲೈಂಗಿಕ ಬದುಕು ಉತ್ತಮವಾಗಿರಬೇಕಂದ್ರೆ ಸರಿಯಾದ ವ್ಯಾಯಾಮ, ಸೂಕ್ತ ಡಯಟ್, ಉತ್ತಮ ಜೀವನ ಶೈಲಿ ಇರಲೇಬೇಕು.
ತಜ್ಞವೈದ್ಯರ ಪ್ರಕಾರ ಅತಿಯಾದ ಸಕ್ಕರೆ ಅಥವಾ ಸಿಹಿ ಸೇವನೆ ನಿಮ್ಮ ಲೈಂಗಿಕ ಬದುಕಿಗೆ ಮಾರಕವಾಗುತ್ತದೆ. ಸಕ್ಕರೆ ತಿನ್ನೋಕೆ ರುಚಿಯಾಗಿರುತ್ತದೆ ಆದ್ರೆ ಅದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗುತ್ತದೆ. ಇದರಿಂದ ಲೈಂಗಿಕ ಆಸಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು.
ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾದ್ರೆ ಆಯಾಸ ಜಾಸ್ತಿ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಂತೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತ ಹೋಗುತ್ತದೆ. ಅಷ್ಟೇ ಅಲ್ಲ ಅತಿಯಾದ ಸಕ್ಕರೆ ಸೇವನೆಯಿಂದ ಒತ್ತಡ ಕೂಡ ಹೆಚ್ಚಾಗುತ್ತದೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ.
ಹಾಗಂತ ಸಕ್ಕರೆಯನ್ನು ತಿನ್ನಲೇಬಾರದು ಅಂತಲ್ಲ, ಸಿಹಿಯ ಜೊತೆ ಜೊತೆಗೆ ತರಕಾರಿ, ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳಿ. ಅತಿಯಾದ ಸಿಹಿ ಸೇವಿಸುವ ಮುನ್ನ ಜಾಗರೂಕರಾಗಿರಿ.