ಕೊರೊನಾ ಸಾಂಕ್ರಾಮಿಕ ರೋಗ ಜನರಲ್ಲಿ ಭಯ ಹುಟ್ಟಿಸಿದೆ. ಜನರು ತಮ್ಮ ಆರೋಗ್ಯ ರಕ್ಷಣೆಗೆ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ಜನರು ಮನೆ ಮದ್ದಿನ ಮೊರೆ ಹೋಗಿದ್ದಾರೆ. ಔಷಧಿ ಗುಣವನ್ನು ಹೊಂದಿರುವ ತುಳಸಿ ಬಹಳಷ್ಟು ಬಳಕೆಯಾಗ್ತಿದೆ. ತುಳಸಿ ನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದು ಆಯುರ್ವೇದ ವೈದ್ಯರು ಹೇಳಿದ್ದಾರೆ.
ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ತುಳಸಿ ಮತ್ತು ಕರಿಮೆಣಸಿನ ಕಷಾಯವನ್ನು ಬೆಳಿಗ್ಗೆ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕಷಾಯ ಮಾಡಲು ಬೇಕಾಗುವ ಪದಾರ್ಥ : 4 ರಿಂದ 5 ತುಳಸಿ ಎಲೆಗಳು,1/2 ಟೀಸ್ಪೂನ್ ಏಲಕ್ಕಿ ಪುಡಿ, 1/4 ಟೀಸ್ಪೂನ್ ಕಾಳು ಮೆಣಸಿನ ಪುಡಿ, 1 ಇಂಚು ಶುಂಠಿ, 3 ರಿಂದ 4 ಒಣ ದ್ರಾಕ್ಷಿ.
ಕಷಾಯ ಮಾಡುವ ವಿಧಾನ: ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿ ಮೇಲಿನ ಪದಾರ್ಥವನ್ನು ಹಾಕಿ ಕುದಿಸಿ. ಚೆನ್ನಾಗಿ ಕುದ್ದು ನಂತ್ರ ತಣ್ಣಗಾಗಲು ಬಿಡಿ. ನಂತ್ರ ಅದಕ್ಕೆ ಲಿಂಬೆ ರಸ, ಬೆಲ್ಲ ಹಾಕಿ ಕುಡಿಯಿರಿ.
ಇದು ಜೀರ್ಣಕ್ರಿಯೆಯನ್ನು ಸರಿಪಡಿಸುವುದರ ಜೊತೆಗೆ ಇದು ದೇಹದ ಕೊಳಕನ್ನು ತೆಗೆದುಹಾಕುತ್ತದೆ. ಕರಿಮೆಣಸು ಕಫವನ್ನು ತೆಗೆದುಹಾಕುತ್ತದೆ. ತುಳಸಿ-ಶುಂಠಿ ಮತ್ತು ಏಲಕ್ಕಿ ಪುಡಿ ಉರಿಯೂತದ ಗುಣಗಳನ್ನು ಹೊಂದಿವೆ. ತುಳಸಿಯಲ್ಲಿ ಆಂಟಿ-ಮೈಕ್ರೋಬಿಯಲ್ ಗುಣಗಳಿವೆ. ಅದು ಉಸಿರಾಟದ ಸಮಸ್ಯೆ ಕಡಿಮೆ ಮಾಡುತ್ತದೆ. ಈ ಕಷಾಯವನ್ನು ದಿನಕ್ಕೆ ಎರಡು ಬಾರಿ (ಬೆಳಿಗ್ಗೆ ಮತ್ತು ಸಂಜೆ) ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.