ಭಾರತೀಯ ಪ್ರಜೆ ಎಂಬ ನಿಮ್ಮ ಗುರುತನ್ನು ಸಾಬೀತುಪಡಿಸುವ ಪ್ರಮುಖ ದಾಖಲೆಗಳಲ್ಲಿ ಒಂದು ಆಧಾರ್ ಕಾರ್ಡ್. ಈಗ ಎಲ್ಲಾ ಆಪರೇಟರ್‌ಗಳು ಮೊಬೈಲ್ ಫೋನ್‌ಗಳಿಗೆ ಸಿಮ್ ಕಾರ್ಡ್ ನೀಡಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಕೇಳ್ತಾರೆ. ಆಧಾರ್ ಕಾರ್ಡ್ ವಂಚನೆಯ ಘಟನೆಗಳು ದಿನೇ ದಿನೇ ಹೆಚ್ಚುತ್ತಿದ್ದು, ನಾವು ಯಾರೊಂದಿಗೂ ಆಧಾರ್-ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳದೇ ಇರುವುದು ಸೂಕ್ತ,
ಸಿಮ್ ಕಾರ್ಡ್ ಖರೀದಿಸಲು ನೀವು ಮಾರುಕಟ್ಟೆಗೆ ಭೇಟಿ ನೀಡಿದಾಗ ಆಧಾರ್ ಕಾರ್ಡ್ ಜೆರಾಕ್ಸ್ ನೀಡಬೇಕು. ಸಿಮ್ ಕಾರ್ಡ್ ಪಡೆಯಲು KYC ಅಗತ್ಯವಿರುವುದರಿಂದ ಆಧಾರ್ ಕಾರ್ಡ್ ಅನ್ನು ಪರಿಶೀಲನೆಗಾಗಿ ಸಲ್ಲಿಸುತ್ತೇವೆ. ಟೆಲಿಕಾಂ ಕಂಪನಿಯು ನಮ್ಮ ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಆಧಾರ್ ಸಂಖ್ಯೆಯನ್ನು ಬಳಸುತ್ತದೆ. ಈ ಬಗ್ಗೆ ಅರಿವಿಲ್ಲದ ವ್ಯಕ್ತಿಯ ಹೆಸರಿನಲ್ಲಿ ಹಲವು ಸಿಮ್ ಗಳು ಆ್ಯಕ್ಟಿವ್ ಆಗಿರುವ ಹಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ.
ಅಕ್ರಮ ಚಟುವಟಿಕೆಗಳಿಗೆ ಈ ಸಿಮ್‌ಗಳು ಹೆಚ್ಚಾಗಿ ಬಳಕೆಯಾಗುತ್ತಿವೆ. ಹಾಗಾಗಿ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಸಕ್ರಿಯವಾಗಿವೆ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ. ಆಧಾರ್ ಅನ್ನು ನಿಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಮಾತ್ರ ಲಿಂಕ್ ಮಾಡಲಾಗಿದೆ ಮತ್ತು ಅದನ್ನು ವಂಚಕರು ಬಳಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸರ್ಕಾರದ ನಿಯಮಗಳ ಪ್ರಕಾರ, ಆಧಾರ್ ಕಾರ್ಡ್‌ನಲ್ಲಿ ಒಟ್ಟು 9 ಸಿಮ್‌ಗಳನ್ನು ತೆಗೆದುಕೊಳ್ಳಬಹುದು, ಆದರೆ ಈ ಸಿಮ್‌ಗಳನ್ನು ಒಬ್ಬ ಆಪರೇಟರ್ ಮಾತ್ರ ಬಳಸಬಹುದಾಗಿದೆ.
ನಿಮ್ಮ ಆಧಾರ್‌ಗೆ ಎಷ್ಟು ಸಿಮ್ ಕಾರ್ಡ್‌ಗಳನ್ನು ಲಿಂಕ್ ಮಾಡಲಾಗಿದೆ ಎಂದು ನಿಮಗೆ ತಿಳಿದಿಲ್ಲ ಎಂದಾದರೆ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಕಂಡುಹಿಡಿಯಬಹುದು. ಟೆಲಿಕಾಂ ಇಲಾಖೆಯ TAFCO ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ, ಎಷ್ಟು SIM ಕಾರ್ಡ್‌ಗಳು ಸಕ್ರಿಯವಾಗಿವೆ ಎಂಬುದನ್ನು ನೀವು ಪರಿಶೀಲಿಸಬಹುದು. ಈ ಪಟ್ಟಿಯಲ್ಲಿ ನಕಲಿ ಸಿಮ್ ಕಂಡುಬಂದರೆ ನೀವು ಅದನ್ನು ನಿರ್ಬಂಧಿಸಬಹುದು. ಬಳಕೆಯಲ್ಲಿಲ್ಲದ ಸಿಮ್ ಕಾರ್ಡ್ ಅನ್ನು ಸಹ ನೀವು ತೆಗೆದುಹಾಕಬಹುದು.
ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಸಿಮ್ ಸಂಖ್ಯೆಯನ್ನು ಪರಿಶೀಲಿಸಲು https://www.tafcop.dgtelecom.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ನೀವು OTP ಅನ್ನು ನಮೂದಿಸುತ್ತಿದ್ದಂತೆ, ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಸಿಮ್‌ನ ಪಟ್ಟಿಯು ಓಪನ್ ಆಗುತ್ತದೆ. ಅಕ್ರಮ ಸಂಖ್ಯೆ ಕಂಡುಬಂದರೆ, ನೀವು ಅದನ್ನು ನಿರ್ಬಂಧಿಸಬಹುದು.