ಪುರಾತನ ಕಾಲದಲ್ಲಿ ಮಣ್ಣಿನ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು. ಮಣ್ಣಿನ ಪಾತ್ರೆಯಲ್ಲಿಯೇ ಅಡುಗೆ, ಆಹಾರ ಸೇವನೆ ಸೇರಿದಂತೆ ಅನೇಕ ಕೆಲಸಗಳಿಗೆ ಬಳಕೆ ಮಾಡಲಾಗ್ತಾಯಿತ್ತು. ಮಣ್ಣಿನ ಪಾತ್ರೆಗಳನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ.
ಪ್ರಗತಿ ಬಯಸುವವರ ಮನೆಯಲ್ಲಿ ಮಣ್ಣಿನ ಪಾತ್ರೆಗಳಿರಬೇಕು. ಮಣ್ಣಿನ ಪಾತ್ರೆಗಳು ಸೌಭಾಗ್ಯ ತರುತ್ತವೆ ಎಂದು ನಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಣ್ಣಿನ ಪಾತ್ರೆಗಳ ಬಳಕೆ ಕಡಿಮೆಯಾಗಿದೆ. ಅಪರೂಪಕ್ಕೊಂದು ಪಾತ್ರೆಯನ್ನು ನಾವು ನೋಡಬಹುದಾಗಿದೆ. ಮಣ್ಣಿನ ಮಡಿಕೆ ಮನೆಯಲ್ಲಿದ್ರೆ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆಯಂತೆ.
ಮನೆಯಲ್ಲಿ ಅಥವಾ ವ್ಯಾಪಾರದ ಸ್ಥಳದಲ್ಲಿ ಮಣ್ಣಿನ ಮಡಿಕೆಯನ್ನು ಅವಶ್ಯಕವಾಗಿ ಇಡಬೇಕು. ಹಾಗೆ ದೇವರ ಮನೆಯಲ್ಲಿ ಮಣ್ಣಿನ ದೇವರ ಮೂರ್ತಿಯಿದ್ರೆ ಮತ್ತಷ್ಟು ಯಶಸ್ಸು ಪ್ರಾಪ್ತಿಯಾಗುತ್ತದೆ. ಒತ್ತಡ ಹಾಗೂ ಮಾನಸಿಕ ಸಮಸ್ಯೆಗೆ ಮಣ್ಣಿನ ಮಡಿಕೆಯಲ್ಲಿರುವ ನೀರು ಒಳ್ಳೆಯದು. ಮನೆಯ ಈಶಾನ್ಯ ಭಾಗದಲ್ಲಿ ಮಣ್ಣಿನ ಮಡಿಕೆಯಲ್ಲಿ ನೀರಿಡಬೇಕಂತೆ. ಮಣ್ಣಿನ ಅಲಂಕಾರಿಕ ವಸ್ತುಗಳು ಅಥವಾ ಪಾತ್ರೆಗಳನ್ನು ಆಗ್ನೇಯ ದಿಕ್ಕಿನಲ್ಲಿಡುವುದು ಮಂಗಳಕರ.