
ಅಡುಗೆ ಮನೆಯಲ್ಲಿ ಇರುವ ಆಹಾರ ಪದಾರ್ಥಗಳು ಅಡುಗೆ ರುಚಿಯನ್ನು ಹೆಚ್ಚಿಸುವ ಜೊತೆಗೆ ನಮ್ಮ ಅದೃಷ್ಟವನ್ನು ಹೆಚ್ಚಿಸುತ್ತವೆ. ಐದು ಏಲಕ್ಕಿಯಲ್ಲಿ ನಮ್ಮ ಆರ್ಥಿಕ ವೃದ್ಧಿ ಮಾಡುವ ಶಕ್ತಿಯಿದೆ.
ಅನೇಕರು ಹಗಲು-ರಾತ್ರಿ ದುಡಿಯುತ್ತಾರೆ. ಆದ್ರೆ ಕೈನಲ್ಲಿ ಹಣ ನಿಲ್ಲುವುದಿಲ್ಲ. ನಿಮ್ಮಲ್ಲೂ ಇದು ಆಗ್ತಿದ್ದರೆ ಒಂದು ಉಪಾಯವನ್ನು ಮಾಡಬಹುದು. ಹಸಿರು ಬಟ್ಟೆಯಲ್ಲಿ ಒಂದು ಏಲಕ್ಕಿ ಕಟ್ಟಿ ತಲೆದಿಂಬಿನ ಕೆಳಗೆ ಇಡಿ. ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಬೇರೆಯವರಿಗೆ ನೀಡಿ. ಇದ್ರಿಂದ ನಿಮ್ಮ ಆರ್ಥಿಕ ವೃದ್ಧಿಯಾಗುತ್ತದೆ.
ಸದಾ ಪರ್ಸ್ ನಲ್ಲಿ ಹಣವಿರಬೇಕು, ಆರ್ಥಿಕ ಕೊರತೆ ಎದುರಾಗಬಾರದು ಎನ್ನುವವರು ಪರ್ಸ್ ನಲ್ಲಿ ಐದು ಏಲಕ್ಕಿಯನ್ನು ಇಟ್ಟುಕೊಳ್ಳಿ.
ಸುಂದರವಾದ ಜೀವನ ಸಂಗಾತಿ ಬೇಕು ಎನ್ನುವವರು ಬಟ್ಟೆಯೊಂದನ್ನು ಖರೀದಿ ಮಾಡಿ. ಅದ್ರಲ್ಲಿ ಐದು ಏಲಕ್ಕಿಯನ್ನು ಹಾಕಿ ಬಡವರಿಗೆ ದಾನ ಮಾಡಿ. ಹೀಗೆ ಮಾಡಿದ್ರೆ ಸುಂದರ ಜೀವನ ಸಂಗಾತಿ ಸಿಗುತ್ತಾರೆ.
ಅಭ್ಯಾಸದಲ್ಲಿ ಹಿಂದಿರುವವರು ಹಾಲಿಗೆ ಏಲಕ್ಕಿ ಹಾಕಿ ಕುದಿಸಿ 7 ಸೋಮವಾರಗಳ ಕಾಲ ಬಡವರಿಗೆ ಕುಡಿಯಲು ನೀಡಬೇಕು.