ವಾಸ್ತು ಶಾಸ್ತ್ರ ಬಹಳ ಮುಖ್ಯವಾದದ್ದು ಎಂದು ನಂಬಲಾಗಿದೆ. ವ್ಯಕ್ತಿ ವಾಸ್ತು ಶಾಸ್ತ್ರವನ್ನು ನಂಬಿದ್ರೆ ಜೀವನದಲ್ಲಿ ಸುಖ-ಶಾಂತಿ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮನೆಯ ಪ್ರಮುಖ ಭಾಗ ಅಡುಗೆ ಮನೆ. ಮನೆಯ ಪ್ರತಿಯೊಬ್ಬರ ಆಹಾರ ಸಿದ್ಧವಾಗುವುದು ಅಲ್ಲಿಯೆ.
ಅಡುಗೆ ಮನೆ ವಾಸ್ತು ಬಹಳ ಮುಖ್ಯ. ವಾಸ್ತು ಶಾಸ್ತ್ರಕ್ಕೆ ಅಡುಗೆ ಮನೆ ವಿರುದ್ಧವಾಗಿದ್ದರೆ ಅನೇಕ ರೋಗಗಳು ಕಾಡುತ್ತವೆ. ಅಡುಗೆ ಮನೆ ರಾಹುವಿನ ಪ್ರಭಾವಕ್ಕೆ ಒಳಗಾದ್ರೆ ಮನೆಯ ಎಲ್ಲ ಸಂತೋಷ ನೋವಾಗಿ ಬದಲಾಗುತ್ತದೆ. ಮನೆಯ ಪ್ರತಿಯೊಬ್ಬರು ಅನಾರೋಗ್ಯಕ್ಕೀಡಾಗುತ್ತಾರೆ. ಅಡುಗೆ ಮನೆಯಲ್ಲಿ ರಾಹು ಪ್ರಭಾವ ಇದೆಯಾ? ಇಲ್ಲವಾ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ವಾಸ್ತು ಶಾಸ್ತ್ರದ ಪ್ರಕಾರ, ರಾಹು ಮುರಿದ ಬಾಗಿಲು, ಬಿರುಕು ಬಿಟ್ಟ ಗೋಡೆ, ಮುರಿದ ವಸ್ತುಗಳಲ್ಲಿ ವಾಸವಾಗಿರುತ್ತಾನಂತೆ. ಕತ್ತಲೆ ಕೋಣೆಯಲ್ಲಿ ರಾಹು ಪ್ರಭಾವ ಹೆಚ್ಚಿರುತ್ತದೆಯಂತೆ. ರಾಹು ಇದ್ದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ಅಡುಗೆ ಮನೆ ತುಂಬಾ ಉದ್ದವಿರಬಾರದು. ಹೊಗೆ ಹೊರಗೆ ಹೋಗುವಂತಿರಬೇಕು. ಬೆಳಕು ಸರಿಯಾಗಿ ಬೀಳಬೇಕು. ಅಡುಗೆ ಮನೆ ಗೋಡೆ ಬಣ್ಣ ಮಸುಕಾಗಿದ್ದರೆ ತಕ್ಷಣ ಬದಲಿಸಿ. ಮಸುಕು ಬಣ್ಣದಲ್ಲಿ ರಾಹು ವಾಸವಾಗುತ್ತಾನೆ. ಬಿರುಕು ಬಿಟ್ಟ ಗೋಡೆಗಳನ್ನು ತುಂಬಿ, ಮುರಿದ ಬಾಗಿಲನ್ನು ಸರಿಪಡಿಸಿ, ಹಾಳಾದ ವಸ್ತುವನ್ನು ಹೊರಗೆ ಎಸೆದು, ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.