ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳಂತೆ ವಾಟ್ಸಾಪ್ ಕೂಡ ಇಂಗ್ಲಿಷ್ ಅನ್ನೇ ಡೀಫಾಲ್ಟ್ ಭಾಷೆಯನ್ನಾಗಿ ಅಳವಡಿಸಿತ್ತು. ಆದ್ರೆ ಬಳಕೆದಾರರು ಇಚ್ಛಿಸಿದಲ್ಲಿ ಅವರಿಗಿಷ್ಟವಾದ ಭಾಷೆಗೆ ಬದಲಾಯಿಸಲು ಅವಕಾಶವಿದೆ. ವಾಟ್ಸಾಪ್ ಸೆಟಪ್ ಮಾಡುವ ಸಂದರ್ಭದಲ್ಲೇ ನಿಮ್ಮ ಆದ್ಯತೆಯ ಭಾಷೆ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ನೀವು ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು, ಅಥವಾ ಬದಲಾಯಿಸಿಕೊಳ್ಳಬಹುದು. ಸೆಟ್ಟಿಂಗ್ಸ್‌ನಲ್ಲಿ ಭಾಷೆಯನ್ನು ಬದಲಾಯಿಸಿದ್ರೆ ಎಲ್ಲಾ ಅಪ್ಲಿಕೇಶನ್‌ಗಳ ಭಾಷೆ ಬದಲಾಗಿಬಿಡುತ್ತದೆ. ಹಾಗಾಗಿ ನೀವು ಕೇವಲ ವಾಟ್ಸಾಪ್‌ನಲ್ಲಿ ಮಾತ್ರ ನಿಮ್ಮಿಷ್ಟದ ಭಾಷೆಯನ್ನು ಬಳಸಲು ಸಹ ಅವಕಾಶವಿದೆ.
ಇದಕ್ಕಾಗಿ ಮೊದಲು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ವಾಟ್ಸಾಪ್ ಓಪನ್ ಮಾಡಿ.
ಮೇಲ್ಗಡೆ ಬಲಭಾಗದಲ್ಲಿರುವ ಮೂರು ಡಾಟ್‌ಗಳ ಮೇಲೆ ಕ್ಲಿಕ್ ಮಾಡಿ.
ಸೆಟ್ಟಿಂಗ್ಸ್ ಓಪನ್ ಮಾಡಿಕೊಳ್ಳಿ.
ಅಕೌಂಟ್ ಕೆಳಭಾಗದಲ್ಲಿರುವ ಚಾಟ್ಸ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಸ್ಕ್ರೀನ್‌ನಲ್ಲಿ ಕಾಣಿಸುವ ಆಪ್ಸ್ ಲಾಂಗ್ವೇಜ್ ಎಂಬುದರ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮಿಷ್ಟದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
ನಿಮ್ಮ ದೇಶದಲ್ಲಿ ಪ್ರಮುಖವಾಗಿ ಬಳಕೆಯಲ್ಲಿರುವ ಅಥವಾ ಮಾತನಾಡುವ ಭಾಷೆಗಳನ್ನು ವಾಟ್ಸಾಪ್ ತೋರಿಸುತ್ತದೆ. ಅದರಲ್ಲಿ ನಿಮಗೆ ಬೇಕಾಗಿದ್ದನ್ನು ಆಯ್ಕೆ ಮಾಡಿಕೊಂಡರೆ ಅದೇ ಭಾಷೆಯಲ್ಲಿ ನೀವು ವಾಟ್ಸಾಪ್ ಬಳಸಬಹುದು.