ಇಂಟರ್ನೆಟ್ ವಿಲಕ್ಷಣ ಮತ್ತು ಅನಿರೀಕ್ಷಿತ ವಿಷಯಗಳಿಂದ ತುಂಬಿದೆ. ಬಹುಶಃ ಇದೀಗ ನೀವು ಹಿಂದೆಂದೂ ನೋಡಿರದ ವಿಡಿಯೋವನ್ನು ನೋಡುತ್ತೀರಿ. ರೆಸ್ಟೋರೆಂಟ್‌ನಲ್ಲಿ ಬಡಿಸಿದ ಆಹಾರದಲ್ಲಿ ಮೀನು ಜೀವಂತವಾಗಿರುವುದು ಕಂಡು ಬಂದಿದೆ.
ಅಂತರ್ಜಾಲದಲ್ಲಿ ವೈರಲ್ ಆಗಿರುವ ಹಳೆಯ ವಿಡಿಯೋದಲ್ಲಿ, ಒಂದು ತಟ್ಟೆಯಲ್ಲಿ ಮೀನನ್ನು ಬಡಿಸುವುದರ ಜೊತೆಗೆ ನಿಂಬೆ ತುಂಡು, ಗಾಜಿನ ನೂಡಲ್ಸ್ ಮತ್ತು ಕೆಲವು ತರಕಾರಿಗಳನ್ನು ಬಡಿಸಲಾಗಿದೆ. ಈ ವೇಳೆ ವ್ಯಕ್ತಿಯೊಬ್ಬರು ಮೀನಿನ ಬಳಿ ಚಾಪ್ ಸ್ಟಿಕ್ ಇಡುತ್ತಿದ್ದಂತೆ ಅದು ಬಾಯ್ತೆರೆದು ಕಚ್ಚಿದೆ.
ಅಬ್ಬಾ…… ವಿಲಕ್ಷಣ ಎಂದೆನಿಸಿದ್ರೂ ಇದು ಸತ್ಯ. ಮೀನು ಇನ್ನೂ ಜೀವಂತವಾಗಿತ್ತು. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇದು 7.8 ಮಿಲಿಯನ್ ವೀಕ್ಷಣೆಗಳು ಗಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ನೆಟ್ಟಿಗರಲ್ಲಿ ಅಸಹ್ಯ ಹುಟ್ಟಿಸಿದೆ. ನಾವು ಇದನ್ನು ಏಕೆ ತಿನ್ನುತ್ತಿದ್ದೇವೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
https://www.youtube.com/watch?v=LhzKE8Ny5n4